ಮತ್ತೇ ಬಣ್ಣದ ಲೋಕಕ್ಕೆ ವಾಪಾಸ್ಸಾದ ಹರ್ಷಿಕಾ ಪೂಣಚ್ಚ, ನಟಿಯಾಗಿ ಅಲ್ಲ

Sampriya

ಗುರುವಾರ, 20 ಮಾರ್ಚ್ 2025 (19:45 IST)
Photo Courtesy X
ಈಚೆಗೆ ಹೆಣ್ಣು ಮಗುವಿಗೆ ಜನ್ಮನೀಡಿ, ಸಿನಿಮಾ ರಂಗದಿಂದ ಕೊಂಚ ಬ್ರೇಕ್ ಪಡೆದಿದ್ದ ಕನ್ನಡದ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಇದೀಗ ಮತ್ತೇ ಬಣ್ಣದ ಲೋಕಕ್ಕೆ ವಾಪಾಸ್ಸಾಗಿದ್ದಾರೆ. ಆದರೆ ನಟನೇ ಮೂಲಕ ಅಲ್ಲ, ಬದಲಿಗೆ ನಿರ್ದೇಶಕಿಯಾಗಿ.

ಅದು ಕೂಡ ನೈಜ ಘಟನೆಯ ಆಧಾರಿತ, ಕ್ರೈಂ ಥ್ರಿಲ್ಲರ್‌ ಕಥೆ ಮೂಲಕ ಸಿನಿಮಾ ಒಂದಕ್ಕೆ ಆಕ್ಷನ್‌ ಕಟ್‌ ಹೇಳುವುದಕ್ಕೆ ಹರ್ಷಿಕಾ ಪೂಣಚ್ಚ ಹೊರಟಿದ್ದಾರೆ. ಈ ಮೂಲಕ ಮೊದಲ ಬಾರಿ ಡೈರೆಕ್ಟರ್ ಹ್ಯಾಟ್ ತೊಟ್ಟಿದ್ದಾರೆ.

ನಿರ್ದೇಶಕಿಯಾಗಿ ಬಡ್ತಿ ಪಡೆಯುತ್ತಿರುವ ವಿಚಾರವನ್ನು ಹರ್ಷಿಕಾ ಪೂಣಚ್ಚ ತಮ್ಮ ಇನ್ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ಹಂಚಿಕೊಂಡಿದ್ದಾರೆ. ಅಲ್ಲದೇ, 'ಹೊಸ ಆರಂಭಗಳು, ನನ್ನ ಮೊದಲ ನಿರ್ದೇಶನದ ಡೆಬ್ಯೂಗೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಬೇಕು' ಎಂದು ಕ್ಯಾಪ್ಶನ್‌ ಬರೆದುಕೊಂಡಿದ್ದಾರೆ.

ಹರ್ಷಿಕಾ ಮೊದಲ ನಿರ್ದೇಶನದ ಸಿನಿಮಾದ ಹೆಸರು ʻಚಿ: ಸೌಜನ್ಯʼ! ʻಒಂದು ಹೆಣ್ಣಿನ ಕಥೆʼ ಎಂಬ ಟ್ಯಾಗ್‌ ಲೈನ್‌ ಕೂಡ ಇದೆ. ಹರ್ಷಿಕಾ ಪತಿ, ನಟ ಹಾಗೂ ನಿರ್ಮಾಪಕ ಭುವನ್‌ ಪೊನ್ನಣ್ಣ, ಮಧು ಸ್ವಾಮಿ ಮತ್ತು ಗಣೇಶ್‌ ಮಹದೇವ್‌ ಅವರು ಜೊತೆಗೂಡಿ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಕಂಸಾಳೆ ಫಿಲ್ಮ್ಸ್‌ ಮತ್ತು ಭುವನಂ ಎಂಟರ್‌ಟೈನ್‌ಮೆಂಟ್‌ ಅಡಿಯಲ್ಲಿ ಈ ಸಿನಿಮಾ ಮೂಡಿ ಬರಲಿದೆ.

ಇನ್ನೂ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ಖ್ಯಾತ ನಟ ಕಿಶೋರ್ ಮಾಡಲಿದ್ದಾರೆ. ಇನ್ನೂ ವಿಲನ್ ಆಗಿ ಬಿಗ್‌ಬಾಸ್ ಖ್ಯಾತಿಯ ಉಗ್ರಂ ಮಂಜು ಮತ್ತು ಕಾಕ್ರೋಚ್‌ ಸುಧಿ ಕಾಣಿಸಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ