ಹರ್ಷಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಡೆಲಿವರಿಯಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುವುದಾಗಿ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ನವರಾತ್ರಿಯ ಮೊದಲ ದಿನವೇ ಹೆಣ್ಣು ಮಗು ಜನಿಸಿರುವುದು ನಿಜಕ್ಕೂ ವಿಶೇಷವಾಗಿದೆ.
ನಟಿ ಮಿಲನಾ ನಾಗರಾಜ್, ಕವಿತಾ ಗೌಡ ಬಳಿಕ ಸ್ಯಾಂಡಲ್ ವುಡ್ ನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದ ಮತ್ತೊಬ್ಬ ದಂಪತಿ ಹರ್ಷಿಕಾ-ಭುವನ್ ಆಗಿದ್ದರು. ಹರ್ಷಿಕಾ ಮತ್ತು ಭುವನ್ ಬಹಳ ವರ್ಷಗಳ ಕಾಲ ಪ್ರೀತಿಸಿ ಕಳೆದ ವರ್ಷ ಆಗಸ್ಟ್ ನಲ್ಲಿ ಹಿರಿಯರ ಸಮ್ಮುಖದಲ್ಲಿ ಕೊಡವ ಶೈಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.