ರಜನಿಕಾಂತ್‌ಗೆ ಬಿಜೆಪಿಯಿಂದ ತೆಲಂಗಾಣ ರಾಜ್ಯಪಾಲ ಹುದ್ದೆ ಆಫರ್ ಬಂತಾ..?

ಶುಕ್ರವಾರ, 8 ಸೆಪ್ಟಂಬರ್ 2023 (16:41 IST)
ಖ್ಯಾತ ನಟ ರಜನಿಕಾಂತ್‌ ಅವರನ್ನು ತೆಲಂಗಾಣದ ನೂತನ ರಾಜ್ಯಪಾಲರಾಗಿ ನೇಮಿಸುವ ಸುದ್ದಿಯೊಂದು ಭಾರೀ ಸದ್ದು ಮಾಡಿದೆ.ತಮಿಳುನಾಡು ಮತ್ತು ತೆಲಂಗಾಣದಲ್ಲಿ ರಜನಿಕಾಂತ್  ಬಹುದೊಡ್ಡ ಜನಬೆಂಬಲ ಹೊಂದಿದ್ದಾರೆ. ಇದನ್ನು ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯಪಾಲರಾಗುವಂತೆ ಬಿಜೆಪಿ ರಜನಿಗೆ ಆಫರ್‌ ನೀಡಿದೆ. ಇದನ್ನು ಸ್ವತಃ ರಜನಿ ಕೂಡಾ ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಒಂದು ವೇಳೆ ರಜನಿ ಒಪ್ಪಿದರೆ ಯಾವುದೇ ಸಂದರ್ಭದಲ್ಲಿ ಅವರ ನೇಮಕ ಆಗಬಹುದು ಎಂಬ ಸುದ್ದಿ ಹಬ್ಬಿದೆ.ಇತ್ತೀಚೆಗಷ್ಟೇ ರಜನಿ ಅವರ ಸೋದರ ಸತ್ಯನಾರಾಯಣ ರಾವ್‌ ಅವರು ‘ರಜನೀಕಾಂತ್‌ ಅವರು ನೇರವಾಗಿ ರಾಜಕೀಯಕ್ಕೆ ಪ್ರವೇಶಿಸದೇ ಇರಬಹುದು. ಆದರೆ ಖಂಡಿತ ಅವರು ರಾಜ್ಯದ ರಾಜ್ಯಪಾಲರಾಗುತ್ತಾರೆ’ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ