ಇಂದು ಬಿಜೆಪಿ ನಿಯೋಗದಲ್ಲಿ ಮುಂದುವರಿದ ಪ್ರತಿಭಟನೆ

ಶುಕ್ರವಾರ, 8 ಸೆಪ್ಟಂಬರ್ 2023 (10:42 IST)
ಮಂಡ್ಯ : ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನೀರು ಹರಿಸುತ್ತಿರೋ ವಿಚಾರಕ್ಕೆ ರಾಜ್ಯದಲ್ಲಿ ಖಂಡನೆಗಳು ವ್ಯಕ್ತವಾಗುತ್ತಿವೆ. ಇದೀಗ ರಾಜ್ಯ ಬಿಜೆಪಿ ಕೆಆರ್ಎಸ್ನ ವಸ್ತುಸ್ಥಿತಿ ಅರಿಯಲು ಇಂದು (ಶುಕ್ರವಾರ) ಡ್ಯಾಂ ಬಳಿಗೆ ನಿಯೋಗದ ಮೂಲಕ ತೆರಳಿದೆ. ಇತ್ತ ಮಂಡ್ಯ ಜಿಲ್ಲೆಯಲ್ಲಿ ಅನ್ನದಾತರ ಪ್ರತಿಭಟನೆ ಮುಂದುವರಿದಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಮೇರೆ ರಾಜ್ಯ ಸರ್ಕಾರ ಕಳೆದ 9 ದಿನಗಳಿಂದ ಕೆಆರ್ಎಸ್ ಡ್ಯಾಂನಿಂದ ತಮಿಳುನಾಡಿಗೆ ನಿತ್ಯ ಐದು ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಮಂಡ್ಯದಲ್ಲಿ ಅನ್ನದಾತರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇಂದು ಬಿಜೆಪಿ ನಿಯೋಗ ಕೆಆರ್ಎಸ್ಗೆ ವಸ್ತುಸ್ಥಿತಿಯನ್ನು ತಿಳಿಯಲು ಬರುತ್ತಿದೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಗೋಪಾಲಯ್ಯ, ಸಂಸದರಾದ ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ, ಮೈಸೂರಿನ ಬಿಜೆಪಿ ಶಾಸಕರು ಹಾಗೂ ಮುಖಂಡರು ನಿಯೋಗದಲ್ಲಿ ಬರಲಿದ್ದಾರೆ.

ಕೆಆರ್ಎಸ್ನಲ್ಲಿ ಇರುವ ನೀರು ಮುಂದಿನ ಐದು ದಿನ ತಮಿಳುನಾಡಿಗೆ ಐದು ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟರೆ ಎಷ್ಟು ನೀರು ಉಳಿಯುತ್ತದೆ. ಅಲ್ಲದೇ ಮುಂದೆ ಮಳೆ ಬೀಳದೆ ಇದ್ದರೆ ಜನರು ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಮಾಹಿತಿಯನ್ನು ಈ ನಿಯೋಗ ತಿಳಿಯಲಿದೆ. ಮುಂದೆ ರಾಜ್ಯ ಬಿಜೆಪಿ ಈ ವಿಚಾರವನ್ನು ಇಟ್ಟುಕೊಂಡು ಹೇಗೆ ಹೋರಾಟದ ರೂಪುರೇಷೆಯನ್ನು ರೂಪಿಸಬೇಕೆಂದು ಇಲ್ಲಿ ಚರ್ಚೆ ಮಾಡಲಾಗುತ್ತದೆ. ಮಧ್ಯಾಹ್ನ 2:30ರ ವೇಳೆ ಬಿಜೆಪಿ ನಿಯೋಗ ಕೆಆರ್ಎಸ್ಗೆ ಬರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ