ಆತ ಹೀರೋ ಅಲ್ಲ, ಖಳನಾಯಕ: ದರ್ಶನ್ ವಿರುದ್ಧ ರೇಣುಕಾಸ್ವಾಮಿ ತಂದೆ ಆಕ್ರೋಶ

Sampriya

ಬುಧವಾರ, 12 ಜೂನ್ 2024 (15:46 IST)
ಚಿತ್ರದುರ್ಗ: ನಟ ದರ್ಶನ್‌ಗೆ ಶಿಕ್ಷೆ ಆಗಲೇಬೇಕು, ಅವನು ಹೀರೋ ಅಲ್ಲ ಖಳನಾಯಕ. ಬರೀ ತೆರೆ ಮೇಲೆ ಮಾತ್ರ ಹೀರೋ ತರ ನಾಟಕವಾಡುತ್ತಾನೆ. ಅವನಿಗೆ ಮಾನವೀಯತೆ ಅನ್ನೋದೇ ಗೊತ್ತಿಲ್ಲ, ಮನುಷ್ಯತ್ವವೂ ಇಲ್ಲ ಎಂದು ಕೊಲೆಯಾದ ರೇಣುಕಾಸ್ವಾಮಿ ತಂದೆ ಕಾಶಿನಾಥ ಶಿವನಗೌಡ ಕಿಡಿಕಾರಿದ್ದಾರೆ.

ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ, ಅವನಿಗೆ ಇಂತಹ ಶಿಕ್ಷೆಯಾ? ಏನು ಮಾಡದ ತಪ್ಪಿಗೆ ನನ್ನ ಮಗ ಬಲಿ ಆದ. ಅವನ ಪಾಡಿಗೆ ಅವನು ಇದ್ದ, ಏನೂ ಮಾಡಿಲ್ಲ. ಯಾವುದೇ ಗಲಾಟೆ ಗೋಜಿಗೆ ಹೋಗಿರಲಿಲ್ಲ ಎಂದು ಅವರು ಹೇಳಿದ್ದಾರೆ.

ನನ್ನ ಮಗ ಹಾಗೂ ಪವಿತ್ರಾ ಗೌಡ ನಡುವೆ ಚಾಟಿಂಗ್ ನಡೆಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ. ನಿರಂತರ ಚಾಟಿಂಗ್ ಮಾಡುತ್ತಿದ್ದರು ಎಂದು ಮಾಹಿತಿ ಕೊಟ್ಟಿದ್ದಾರೆ ಎಂದು ರೇಣುಕಾ ಸ್ವಾಮಿ ತಾಯಿ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌, ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ 13 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರನ್ನು ಹೆಚ್ಚಿನ ವಿಚಾರಣೆಗಾಗಿ 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ