ಮನೆ ಊಟ ಕೊಡಿ ಎಂದಿದ್ದ ದರ್ಶನ್ ಗೆ ಹೈಕೋರ್ಟ್ ಖಡಕ್ ಆದೇಶ

Krishnaveni K

ಬುಧವಾರ, 10 ಜುಲೈ 2024 (13:54 IST)
ಬೆಂಗಳೂರು: ಜೈಲೂಟ ಸೇರುತ್ತಿಲ್ಲ, ಅನಾರೋಗ್ಯ ಕಾಡುತ್ತಿದೆ, ಮನೆ ಆಹಾರಕ್ಕೆ ಅವಕಾಶ ಕೊಡಿ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ನಟ ದರ್ಶನ್ ಗೆ ಕೋರ್ಟ್ ಖಡಕ್ ಆದೇಶ ನೀಡಿದೆ.

ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಊಟ ಸರಿಯಾಗಿ ಸೇರದೇ ದಿನೇ ದಿನೇ ತೂಕ ಕಳೆದುಕೊಳ್ಳುತ್ತಿದ್ದಾರೆ. ಅವರಿಗೆ ಬೇಧಿ, ಅತಿಸಾರದಂತಹ ಅಜೀರ್ಣ ಸಮಸ್ಯೆ ಕಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಜೈಲು ಅಧಿಕಾರಿಗಳಿಗೆ ಮನೆ ಆಹಾರ ನೀಡಲು ಅವಕಾಶ ಕೊಡುವಂತೆ ಮನವಿ ಮಾಡಿದ್ದರು. ಆದರೆ ಕೋರ್ಟ್ ಅನುಮತಿ ನೀಡದೇ ನಾವು ಕೊಡಲ್ಲ ಎಂದು ಜೈಲು ಅಧಿಕಾರಿಗಳು ಹೇಳಿದ್ದರು.

ಅದರಂತೆ ದರ್ಶನ್ ಪರ ವಕೀಲರು ನೇರವಾಗಿ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ದರ್ಶನ್ ಗೆ ಮನೆ ಆಹಾರ, ಹಾಸಿಗೆ, ಪುಸ್ತಕ ನೀಡಲು ಅವಕಾಶ ಕೊಡಿ ಎಂದು ಕೋರಿದ್ದರು. ಆದರೆ ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಇದನ್ನು ಬೇರೆ ಪ್ರಕರಣಗಳಂತೇ ನೋಡಲಾಗುವುದು, ಕಾನೂನಿ ಪ್ರಕಾರವೇ ಕ್ರಮ ಕೈಗೊಳ್ಳಲಾಗುವುದು ಎಂದಿದೆ.

ಈ ಬಗ್ಗೆ ಜೈಲು ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಕುಮಾರ್ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸದೇ ನೇರವಾಗಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದನ್ನು ಪ್ರಶ್ನೆ ಮಾಡಿದ್ದಾರೆ. ಅಲ್ಲದೆ, ಈ ರಿಟ್ ಅರ್ಜಿಯ ವಿಚಾರಣೆಯನ್ನು ಜುಲೈ 18 ಕ್ಕೆ ಮುಂದೂಡಿದ್ದಾರೆ. ಹೀಗಾಗಿ ಸದ್ಯಕ್ಕೆ ಅಲ್ಲಿಯವರೆಗೆ ದರ್ಶನ್ ಗೆ ಜೈಲೂಟವೇ ಫಿಕ್ಸ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ