ಜೈಲಿನಲ್ಲಿ ಅಜೀರ್ಣ, ಬೇಧಿಯಾಗುತ್ತಿದೆ: ಈ ವಿಶೇಷ ಸೌಲಭ್ಯಗಳಿಗೆ ಬೇಡಿಕೆಯಿಟ್ಟ ದರ್ಶನ್

Krishnaveni K

ಮಂಗಳವಾರ, 9 ಜುಲೈ 2024 (14:13 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಈಗ ಕೆಲವು ವಿಶೇಷ ಸೌಲಭ್ಯ ಒದಗಿಸುವಂತೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಹತ್ತೇ ದಿನಗಳಲ್ಲಿ ತೂಕ ಕಳೆದುಕೊಂಡಿದ್ದಾರೆ. ಅವರು ಈ ರೀತಿ ಏಕಾಏಕಿ ತೂಕ ಕಳೆದುಕೊಳ್ಳುತ್ತಿರುವುದು ಅವರ ಚಿಂತೆಗೆ ಕಾರಣವಾಗಿದೆ. ಹೀಗಾಗಿ ಜೈಲಿನಲ್ಲಿ ಕೆಲವು ವಿಶೇಷ ಸೌಲಭ್ಯ ಒದಗಿಸಿಕೊಡಲು ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಜೈಲಿನಲ್ಲಿ ದರ್ಶನ್ ಅವರನ್ನು ಸಾಮಾನ್ಯ ಖೈದಿಯಂತೆ ಟ್ರೀಟ್ ಮಾಡಲಾಗುತ್ತಿದೆ. ಜೈಲಿನ ಊಟವನ್ನೇ ನೀಡಲಾಗುತ್ತಿದೆ. ಆದರೆ ಜೈಲಿನ ಊಟ ಅಜೀರ್ಣವಾಗುತ್ತಿದೆ, ಬೇಧಿ ಸಮಸ್ಯೆಯಾಗುತ್ತಿದೆ. ಹೀಗಾಗಿ ತೂಕ ಕಳೆದುಕೊಳ್ಳುತ್ತಿದ್ದೇನೆ. ಹೀಗಾಗಿ ಮನೆ ಊಟ ಕೊಡಿ ಎಂದು ಹೈಕೋರ್ಟ್ ಗೆ ಮೊರೆ ಹೋಗಿದ್ದಾರೆ.

ಅಷ್ಟೇ ಅಲ್ಲದೆ, ಜೈಲಿನಲ್ಲಿ ನಿದ್ರೆ ಬರುತ್ತಿಲ್ಲ, ಹೀಗಾಗಿ ಹಾಸಿಗೆ ವ್ಯವಸ್ಥೆ ಮಾಡಿಕೊಡಿ ಮತ್ತು ಟೈಂ ಪಾಸ್ ಆಗಲು ಓದಲು ಪುಸ್ತಕ ನೀಡಿ ಎಂದು ದರ್ಶನ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಅವರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈಗ ಹೈಕೋರ್ಟ್ ಈ ಎಲ್ಲಾ ವ್ಯವಸ್ಥೆಗಳಿಗೆ ಅಸ್ತು ಎನ್ನುತ್ತದಾ ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ