ರೇಣುಕಾಸ್ವಾಮಿ ದೇಹ ಸಿಕ್ಕಿ ಇಂದಿಗೆ ಒಂದು ತಿಂಗಳು: ಅಂದು ಇದೇ ದಿನ ಏನಾಗಿತ್ತು

Krishnaveni K

ಮಂಗಳವಾರ, 9 ಜುಲೈ 2024 (12:13 IST)
ಬೆಂಗಳೂರು: ದರ್ಶನ್ ಆಂಡ್ ಗ್ಯಾಂಗ್ ನಿಂದ ಹತ್ಯೆಗೊಳಗಾಗಿದ್ದಾನೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಮೃತದೇಹ ಸಿಕ್ಕಿ ಇಂದಿಗೆ ಒಂದು ತಿಂಗಳು ಕಳೆದಿದೆ. ಇದೇ ದಿನ ಜೂನ್ 9 ರಂದು ರೇಣುಕಾಸ್ವಾಮಿ ಮೃತದೇಹ ಸುಮನಹಳ್ಳಿ ಕಾಲುವೆಯಲ್ಲಿ ಸಿಕ್ಕಿತ್ತು.

ಜೂನ್ 8 ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಕಾರಿನಲ್ಲಿ ಕರೆತಂದು ಪಟ್ಟಣಗೆರೆ ಶೆಡ್ ನಲ್ಲಿರಿಸಿ ಹಲ್ಲೆ ನಡೆಸಿ ಹತ್ಯೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸಾಕಷ್ಟು ಸಾಕ್ಷ್ಯಗಳೂ ಸಿಕ್ಕಿವೆ. ನಟ ದರ್ಶನ್ ಮತ್ತು ಗ್ಯಾಂಗ್ ಜೂನ್ 8 ರ ತಡರಾತ್ರಿ ರೇಣುಕಾಸ್ವಾಮಿ ಮೃತದೇಹವನ್ನು ಸುಮನಹಳ್ಳಿ ಕಾಲುವೆ ಬಳಿ ಬಿಸಾಕಿದ್ದರು.

ಇದೇ ದಿನ ಅಂದು ಬೆಳಿಗ್ಗೆ ರೇಣುಕಾಸ್ವಾಮಿ ಮೃತದೇಹವನ್ನು ಸತ್ವಾ ಅಪಾರ್ಟ್ ಮೆಂಟ್ ಸೆಕ್ಯುರಿಟಿ ಗಾರ್ಡ್ ಪತ್ತೆ ಹಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದಾದ ಬಳಿಕ ಪೊಲೀಸರು ಬಹುಶಃ ಅಪರಿಚಿತ ಶವ ಸಿಕ್ಕಿದೆ ಎಂದು ಕೇಸ್ ಸಾಧಾರಣ ಗತಿಯಲ್ಲಿ ತನಿಖೆ ನಡೆಸುತ್ತಿದ್ದರೇನೋ.

ಆದರೆ ನಟ ದರ್ಶನ್ ಆಪ್ತರು ಮರುದಿನ ಬಂದು ಪೊಲೀಸ್ ಠಾಣೆಯಲ್ಲಿ ಶರಣಾದ ಬಳಿಕ ಕೇಸ್ ಗೆ ಟ್ವಿಸ್ಟ್ ಸಿಕ್ಕಿತ್ತು. ಇದಾದ ಬಳಿಕ ದರ್ಶನ್ ಸಹಿತ ಹಲವು ಆರೋಪಿಗಳನ್ನು ಬಂಧಿಸಿ ಪೊಲೀಸರು  ವಿಚಾರಣೆ ನಡೆಸಿದ್ದರು. ಈ ಪ್ರಕರಣ ಭಾರೀ ಸದ್ದು ಮಾಡಿತ್ತು. ಇದೀಗ ದರ್ಶನ್ ಆಂಡ್ ಗ್ಯಾಂಗ್ ನ್ಯಾಯಾಂಗ ಬಂಧನದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ