ದರ್ಶನ್ ಗೆ ಮನೆ ಊಟಕ್ಕೆ ಅನುಮತಿ ಕೊಟ್ಟರೂ ಬೇಕಾಬಿಟ್ಟಿ ಬಿರಿಯಾನಿ ತಿನ್ನೋ ಹಾಗಿಲ್ಲ: ಇಲ್ಲಿದೆ ರೂಲ್ಸ್ ವಿವರ

Krishnaveni K

ಬುಧವಾರ, 10 ಜುಲೈ 2024 (10:14 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ತಮಗೆ ಜೈಲೂಟ ಸೇರುತ್ತಿಲ್ಲ, ಮನೆ ಊಟಕ್ಕೆ ಅವಕಾಶ ಕೊಡಿ ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಮನೆ ಊಟ ಎಂದ ಮಾತ್ರಕ್ಕೆ ಬೇಕಾಬಿಟ್ಟಿ ತಿನ್ನಬಹುದು ಎಂದು ಅರ್ಥವಲ್ಲ. ಅದರ ನಿಯಮಗಳು ಇಲ್ಲಿದೆ ನೋಡಿ.

ಸಾಮಾನ್ಯವಾಗಿ ಕೈದಿಯ ಆರೋಗ್ಯ ಗಮನದಲ್ಲಿಟ್ಟುಕೊಂಡು ಕೋರ್ಟ್ ಆತನಿಗೆ ಮನೆ ಊಟ ಮಾಡಲು ಅವಕಾಶ ನೀಡುತ್ತದೆ. ಇದಕ್ಕಾಗಿ ಪ್ರತಿನಿತ್ಯ ಅವರ ಊಟವನ್ನು ಮನೆಯಿಂದ ಒಬ್ಬ ವ್ಯಕ್ತಿ ತಂದುಕೊಡಬೇಕು. ಜೈಲಿನ ಐಡಿ ಕಾರ್ಡ್, ಒಪ್ಪಿಗೆ ಪತ್ರ ಪಡೆದ ವ್ಯಕ್ತಿಯಷ್ಟೇ ಊಟ ತರಬಹುದಾಗಿದೆ.

ಒಂದು ವೇಳೆ ಆತನಿಗೆ ಅನಿವಾರ್ಯವಾಗಿ ಒಂದು ದಿನ ಬರಲಾಗದೇ ಇದ್ದರೆ ಮೊದಲೇ ಬೇರೊಬ್ಬ ವ್ಯಕ್ತಿ ಬರುವುದಾಗಿ ಒಪ್ಪಿಗೆ ಪಡೆದು ಈ ಮೊದಲೇ ನಿಗದಿತ ವ್ಯಕ್ತಿಗೆ ನೀಡಲಾಗಿದ್ದ ಐಡಿ ಕಾರ್ಡ್ ತೆಗೆದುಕೊಂಡು ಬರಬೇಕಾಗುತ್ತದೆ. ಇದರಿಂದ ಜೈಲಿನಲ್ಲಿ ಕೈದಿಗೆ ನೀಡಲಾಗುವ ಊಟೋಪಚಾರದ ಖರ್ಚು ವೆಚ್ಚವೇನೋ ಕಡಿಮೆಯಾಗುತ್ತದೆ. ಜೊತೆಗೆ ಆಹಾರದಿಂದ ಅನಾರೋಗ್ಯವಾದರೆ ಜೈಲು ಅಧಿಕಾರಿಗಳು ಹೊಣೆಯಾಗಿರುವುದಿಲ್ಲ.

ಆದರೆ ಮನೆ ಊಟ ಎಂಬ ಮಾತ್ರಕ್ಕೆ ದರ್ಶನ್ ಗೆ ಪ್ರತಿನಿತ್ಯ ಬಾಡೂಟ ಅಂತೂ ಸಿಗಲ್ಲ. ಯಾವುದೇ ಕೈದಿಗೂ ಮನೆ ಊಟ ಎಂದರೆ ಅಧಿಕ ಕೊಬ್ಬಿನಂಶವಿರುವ ಅಂದರೆ ಮಾಂಸಾಹಾರದ ಊಟ ತಂದುಕೊಡಲು ಅವಕಾಶವಿಲ್ಲ. ಜೈಲಿನ ನಿಯಮದ ಪ್ರಕಾರವೇ ಇಂತಿಷ್ಟೇ ಆಹಾರವನ್ನು ಮಾತ್ರ ಮನೆಯಿಂದ ತಂದುಕೊಡಬಹುದಾಗಿದೆ. ಅದೂ ಜೈಲಿನಲ್ಲಿ ಅನುಮತಿಸಲಾದ ಆಹಾರವನ್ನಷ್ಟೇ ಕೊಡಬಹುದಾಗಿದೆ. ಇಷ್ಟೆಲ್ಲಾ ಮಾಡಬೇಕಾದರೆ ಕೋರ್ಟ್ ಅನುಮತಿ ಕಡ್ಡಾಯವಾಗಿ ಬೇಕಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ