ಆಸ್ಕರ್ ನಲ್ಲಿ ನಾಟ್ಟು,ನಾಟ್ಟು ಲೈವ್ ಪರ್ಫಾರ್ಮೆನ್ಸ್: ಹಾಡುವವರು ಯಾರು?

ಗುರುವಾರ, 2 ಮಾರ್ಚ್ 2023 (08:30 IST)
Photo Courtesy: Twitter
ಹೈದರಾಬಾದ್: ಇದೇ ತಿಂಗಳು ನಡೆಯಲಿರುವ ಪ್ರತಿಷ್ಠಿತ ಆಸ್ಕರ್ ಅವಾರ್ಡ್ ಸಮಾರಂಭದಲ್ಲಿ ಭಾರತದ ಹೆಮ್ಮೆಯ ಆರ್ ಆರ್ ಆರ್ ಸಿನಿಮಾ ಕೂಡಾ ಸ್ಪರ್ಧೆಯಲ್ಲಿರುವುದು ವಿಶೇಷ.

ಈ ಸಿನಿಮಾದ ನಾಟ್ಟು ನಾಟ್ಟು ಹಾಡು ಅತ್ಯುತ್ತಮ ಮೂಲ ಹಾಡು ವಿಭಾಗದಲ್ಲಿ ಸ್ಪರ್ಧಿಸುತ್ತಿದೆ. ಜೊತೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದ ನಾಟ್ಟು ನಾಟ್ಟು ಹಾಡನ್ನು ಲೈವ್ ಆಗಿ ಆಸ್ಕರ್ ವೇದಿಕೆಯಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.

ಈ ಹಾಡನ್ನು ಆಸ್ಕರ್ ವೇದಿಕೆಯಲ್ಲಿ ಗಾಯಕರಾದ ರಾಹುಲ್ ಸಿಪ್ಲಿಗುಂಜ್ ಮತ್ತು ಕಾಲ ಭೈರವ ಹಾಡಲಿದ್ದಾರೆ. ಈ ವೇಳೆ ನಾಯಕ ನಟರಾದ ಜ್ಯೂ.ಎನ್ ಟಿಆರ್, ರಾಮ್ ಚರಣ್ ತೇಜ ಸೇರಿದಂತೆ ಚಿತ್ರತಂಡವೂ ಸೇರಿಕೊಳ್ಳುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ