ಆಸ್ಕರ್ ವೇದಿಕೆಯಲ್ಲಿ ನಾಟ್ಟು ನಾಟ್ಟು ಹಾಡಿಗೆ ಹೆಜ್ಜೆ ಹಾಕಲಿರುವ ಸುಂದರಿ ಇವರೇ!

ಭಾನುವಾರ, 12 ಮಾರ್ಚ್ 2023 (09:00 IST)
Photo Courtesy: Twitter
ಲಾಸ್ ಏಂಜಲೀಸ್: ಇಂದು ತಡರಾತ್ರಿ ನಡೆಯಲಿರುವ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾರತದ ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡನ್ನು ಲೈವ್ ಆಗಿ ಪ್ರಸ್ತುತಪಡಿಸಲಾಗುತ್ತದೆ.

ಗಾಯಕರಾದ ಕಾಲಭೈರವ, ರಾಹುಲ್, ಸಂಗೀತ ನಿರ್ದೇಶಕ ಕೀರವಾಣಿ ಈ ಹಾಡನ್ನು ಪ್ರಸ್ತುತಪಡಿಸಲಿದ್ದಾರೆ. ಈ ವೇಳೆ ನಾಟ್ಟು ನಾಟ್ಟು ಹಾಡಿಗೆ ಹಿನ್ನಲೆಯಲ್ಲಿ ನೃತ್ಯ ಮಾಡುವವರು ಯಾರು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಅಮೆರಿಕಾ ಮೂಲದ ನಟಿ ಲಾರೆನ್ ಗೊಟಿಲೆಬ್ ಎಂಬಾಕೆ ನಾಟ್ಟು ನಾಟ್ಟು ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಇದಕ್ಕೆ ಮೊದಲು ಸ್ವತಃ ಜ್ಯೂ.ಎನ್ ಟಿಆರ್, ರಾಮ್ ಚರಣ್ ನೃತ್ಯ ಮಾಡಲಿದ್ದಾರೆಯೇ ಎಂದು ಅಭಿಮಾನಿಗಳಲ್ಲಿ ಕುತೂಹಲವಿತ್ತು. ಆದರೆ ಆಸ್ಕರ್ ನಂತಹ ವೇದಿಕೆಯಲ್ಲಿ ಪರ್ಫಾರ್ಮ್ ಮಾಡುವ ಮೊದಲು ಅಭ್ಯಾಸ ನಡೆಸಬೇಕು. ಆದರೆ ಅಭ್ಯಾಸ ನಡೆಸಲು ಸಮಯ ಸಿಗಲಿಲ್ಲ. ಹೀಗಾಗಿ ನಾವು ನೃತ್ಯ ಮಾಡುತ್ತಿಲ್ಲ ಎಂದು ಜ್ಯೂ.ಎನ್ ಟಿಆರ್ ಸ್ಪಷ್ಟಪಡಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ