ಸಲಾರ್ ಬಿಡುಗಡೆ ದಿನಾಂಕದ ಬಗ್ಗೆ ಅಪ್ ಡೇಟ್ ಕೊಟ್ಟ ಹೊಂಬಾಳೆ ಫಿಲಂಸ್

ಬುಧವಾರ, 13 ಸೆಪ್ಟಂಬರ್ 2023 (15:50 IST)
ಬೆಂಗಳೂರು: ಪ್ರಭಾಸ್ ನಾಯಕರಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ಹೊಂಬಾಳೆ ಫಿಲಂಸ್ ನಿರ್ಮಾಣದ ಸಲಾರ್ ಸಿನಿಮಾ ರಿಲೀಸ್ ದಿನಾಂಕದ ಬಗ್ಗೆ ಬಿಗ್ ಅಪ್ ಡೇಟ್ ಸಿಕ್ಕಿದೆ.

ಎಲ್ಲಾ ಸರಿ ಹೋಗಿದ್ದರೆ ಸಿನಿಮಾ ಇದೇ ತಿಂಗಳ 28 ರಂದು ಥಿಯೇಟರ್ ನಲ್ಲಿ ಬಹುಭಾಷೆಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ ಕಾರಣಾಂತರಗಳಿಂದ ಚಿತ್ರತಂಡ ಬಿಡುಗಡೆ ದಿನಾಂಕ ಮುಂದೂಡಿತ್ತು.

ಇದಾದ ಬಳಿಕ ಹೊಸ ಬಿಡುಗಡೆ ದಿನಾಂಕ ಯಾವುದು ಎಂಬ  ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು. ಇದೀಗ ಈ ಬಗ್ಗೆ ಹೊಂಬಾಳೆ ಫಿಲಂಸ್ ಪ್ರಕಟಣೆ ನೀಡಿದ್ದು ಸದ್ಯದಲ್ಲೇ ಹೊಸ ದಿನಾಂಕ ಘೋಷಣೆ ಮಾಡಲಿರುವುದಾಗಿ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ