ಜೆಕೆ ಈ ವರ್ಷ ಬರ್ತಡೇ ಆಚರಿಸಿದ್ದು ಹೇಗೆ ಗೊತ್ತಾ..?

ಬುಧವಾರ, 2 ಮೇ 2018 (06:29 IST)
ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ಜೆಕೆ ಅವರು ಮಂಗಳವಾರ(ಮೇ1 ರಂದು) ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.


ಹೌದು. ಜೆಕೆ ಅವರು ಈ ವರ್ಷ ವೃದ್ಧಾಶ್ರಮವೊಂದರಲ್ಲಿ ಹಿರಿಯರಿಗೆ ಊಟ ಬಡಿಸಿ, ಅವರ ಜೊತೆಗೆ ಜೆಕೆ ತಮ್ಮ ಹುಟ್ಟುಹಬ್ಬವನ್ನ ವಿಶೇಷವಾಗಿ  ಆಚರಿಸಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಲ್ಲದೇ ಅಂದು ಜೆಕೆ ಅಭಿನಯದ 'ಕರಾಳ ರಾತ್ರಿ' ಚಿತ್ರದ ಟ್ರೈಲರ್ ಕೂಡ ಬಿಡುಗಡೆಯಾಗಿದ್ದು, ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿಬಂದ 'ಕರಾಳ ರಾತ್ರಿ' ಚಿತ್ರದಲ್ಲಿ ಅನುಪಮಾ ಗೌಡ, ರಂಗಾಯಣ ರಘು, ಜಯಶ್ರೀನಿವಾಸನ್, ನವೀನ್ ಕೃಷ್ಣ ಸೇರಿದಂತೆ ಹಲವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.


ಇನ್ನು ನಟ ಸುದೀಪ್ ಅವರು ಜೆಕೆಗೆ ಇಂದು ಹ್ಯಾಪಿ ಬರ್ತಡೇ ಮೈ ಬ್ರದರ್, ಈ ಪ್ರೀತಿ ಹೀಗೆ ಇರಲಿ ನನ್ನ ವಿರ್ಶ ಯಾವಾಗ್ಲು ಹೀಗೆ ಇರುತ್ತೆ ಅಂತಾ ಟ್ವಿಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ