ಬೆಂಗಳೂರು : ಸಾಮಾನ್ಯವಾಗಿ ನಮ್ಮ ಕೈಗಳು ಆಗಾಗ ಜುಮ್ಮೆನ್ನುತ್ತವೆ. ಆದರೆ ಏಕೆ ಹೀಗಾಗುತ್ತದೆ ಎಂದು ಬಹುತೇಕರಿಗೆ ತಿಳಿದಿಲ್ಲ. ಒಮ್ಮೊಮ್ಮೆ ನಮ್ಮ ಕೈಗಳು ಮತ್ತು ಕಾಲುಗಳ ಮೇಲೆ ಒತ್ತಡ ಹೆಚ್ಚಾದಾಗ ನರಗಳಲ್ಲಿ ರಕ್ತ ಸಂಚಾರಕ್ಕೆ ಅಡ್ಡಿ ಉಂಟಾಗುವುದರಿಂದ ಜುಮ್ಮೆನ್ನುವ ಅನುಭವವಾಗುತ್ತದೆ.
ಕೆಲವೊಮ್ಮೆ ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ ಬಿ ಕೊರತೆ ಹೆಚ್ಚಾದಾಗಲೂ ಆಯಾಸ, ಚರ್ಮದ ಬಣ್ಣ ಬಿಳಿಯಾಗುವುದು ಮತ್ತು ತೂಕಡಿಕೆಯ ಅನುಭವಾಗುತ್ತದೆ. ವಿಶೇಷವಾಗಿ ರಾತ್ರಿ ಹೊತ್ತಿನಲ್ಲಿ ಕೈಗಳು ಮತ್ತು ಕಾಲುಗಳು ಮರಗಟ್ಟುವಿಕೆ/ಜುಮ್ಮೆನ್ನುವಂತಹ ಸಂವೇದನೆ ಉಂಟಾಗುತ್ತದೆ. ಈ ಸಮಸ್ಯೆಗೆ ಕೆಲವೊಂದು ಪರಿಹಾರಗಳು ಇಲ್ಲಿವೆ.
ಪರಿಹಾರಗಳು:
* ನಿಮ್ಮ ರಕ್ತದ ಪರಿಚಲನೆ ಹೆಚ್ಚಿಸಲು ದಿನನಿತ್ಯವೂ ವಾಕಿಂಗ್, ಜಾಗಿಂಗ್ ಅಥವಾ ಈಜು ಮೊದಲಾದ ವ್ಯಾಯಾಮ ಮಾಡಿ. ಇದರಿಂದ ನಿಮ್ಮ ತೋಳು ಮರಗಟ್ಟುವುದನ್ನು ತಪ್ಪಿಸಬಹುದು.
* ನಿದ್ರೆ ಮಾಡುವಾಗ ಕೈಯನ್ನು ತಲೆಯ ಕೆಳಗಿರಿಸಬೇಡಿ. ನಿಮ್ಮ ಕೈಯನ್ನು ಹಾಸಿಗೆಯ ಕೆಳಗೆ ತೂಗುಬಿಡಬೇಡಿ. ಏಕೆಂದರೆ ಅದು ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆಗೆ ಕಾರಣವಾಗಬಹುದು.
* ಟೈಪಿಂಗ್, ಕಂಪ್ಯೂಟರ್ ಮೌಸ್, ಬಟ್ಟೆ ಹೊಲಿಯುವುದು ಇಂತಹ ಕೆಲಸಗಳನ್ನು ಮಾಡುವಾಗ ಕೆಲಸದ ಮದ್ಯೆ ವಿರಾಮಗಳನ್ನು ತೆಗೆದುಕೊಳ್ಳಿ.
* ರಕ್ತ ಪರಿಚಲನೆ ಸುಧಾರಿಸಲು ನಿಮ್ಮ ಕೈಯನ್ನು ಬಿಸಿನೀರಿನಲ್ಲಿ ಅಥವಾ ತಂಪಾದ ನೀರಿನಲ್ಲಿ ಸ್ವಲ್ಪ ಸಮಯ ಮುಳುಗಿಸಿ.
* ಕೆಲಸದ ಮಧ್ಯೆ ಆಗಾಗ ನಿಮ್ಮ ಭುಜ ಮತ್ತು ಮಾಣಿಕಟ್ಟನ್ನು ತಿರುಗಿಸಿ.
* ಹೆಚ್ಚು ಹೊತ್ತು ಒಂದೇ ಸ್ಥಳದಲ್ಲಿ ಕುಳಿತುಕೊಳ್ಳಬೇಡಿ. ಆಗಾಗ ಎದ್ದು ಓಡಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ