ಅಣ್ಣಾವ್ರಿಗೆ ನೇತ್ರದಾನ ಮಾಡಲು ಭುಜಂಗ ಶೆಟ್ಟಿ ಪ್ರೇರೇಪಿಸಿದ್ದು ಹೇಗೆ?

ಶನಿವಾರ, 20 ಮೇ 2023 (08:29 IST)
Photo Courtesy: facebook
ಬೆಂಗಳೂರು: ಖ್ಯಾತ ನೇತ್ರ ತಜ್ಞ, ನೇತ್ರದಾನದ ಪ್ರೇರಕ ಡಾ. ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಭುಜಂಗ ಶೆಟ್ಟಿಯವರಿಗೆ ಡಾ. ರಾಜ್ ಕುಮಾರ್ ಕುಟುಂಬದ ಜೊತೆ ಉತ್ತಮ ಒಡನಾಟವಿತ್ತು. ಡಾ. ರಾಜ್ ಗೆ ನೇತ್ರದಾನ ಮಾಡಲು ಪ್ರೇರಣೆಯಾದವರೇ ಭುಜಂಗ ಶೆಟ್ಟಿ.

ರಾಜ್ ಕುಮಾರ್ ಒಮ್ಮೆ ಕಣ್ಣಿನ ಟೆಸ್ಟ್ ಗೆ ಬಂದ ಮೇಲೆ ಅವರಿಬ್ಬರ ನಡುವೆ ಒಡನಾಟ ಶುರುವಾಗಿತ್ತು. ಒಮ್ಮೆ ಡಾ. ರಾಜ್ ತಂಗಿಗೆ ಭುಜಂಗ ಶೆಟ್ಟಿಯವರು ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ್ದರು.  ಈ ಸಂದರ್ಭದಲ್ಲಿ ನೇತ್ರದಾನದ ಬಗ್ಗೆ ಅಣ್ಣಾವ್ರಿಗೆ ಮಾಹಿತಿ ನೀಡಿದ್ದರು. ಒಬ್ಬರು ಕಣ್ಣು ದಾನ ಮಾಡುವುದರಿಂದ ಎಷ್ಟೋ ಜನರ ಬದುಕಿಗೆ ಬೆಳಕಾಗಬಹುದು ಎಂದಿದ್ದರು. ಆಗ ಅಣ್ಣಾವ್ರು ನನ್ನ ಕೈಯಿಂದ ಏನು ಮಾಡಬಹುದು ಎಂದು ಕೇಳಿದ್ದರು. ಆಗ ನೇತ್ರದಾನಕ್ಕೆ ಹೆಸರು ನೋಂದಣಿ ಮಾಡಲು ಭುಜಂಗ ಶೆಟ್ಟಿ ಸೂಚಿಸಿದರು. ಹೀಗೆ 1994 ರಲ್ಲಿ ಡಾ.ರಾಜ್ ನೇತ್ರದಾನ ಕೇಂದ್ರವೇ ಆರಂಭವಾಯಿತು. ಇದನ್ನು ಸ್ವತಃ ಡಾ. ಭುಜಂಗ ಶೆಟ್ಟಿಯವರೇ ಹಿಂದೊಮ್ಮೆ ಹೇಳಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ