ಐಪಿಎಲ್ 2023: ಕೆಕೆಆರ್ ವಿರುದ್ಧ ಲಕ್ನೋಗೆ ಗೆಲ್ಲಲೇಬೇಕಾದ ಪಂದ್ಯ
ಲಕ್ನೋ ಈಗಾಗಲೇ 13 ಪಂದ್ಯಗಳಿಂದ 7 ಗೆಲುವು ಸಂಪಾದಿಸಿ, ಚೆನ್ನೈ, ಆರ್ ಸಿಬಿ, ಮುಂಬೈ ಜೊತೆ ಪ್ಲೇ ಆಫ್ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದೆ. ಈ ಪಂದ್ಯವನ್ನು ಗೆದ್ದರೆ ಮಾತ್ರ ಲಕ್ನೋ ಪ್ಲೇ ಆಫ್ ಗೆ ಲಗ್ಗೆಯಿಡಲಿದೆ.
ಅತ್ತ ಕೆಕೆಆರ್ ಗೆ ಪ್ಲೇ ಆಫ್ ಅವಕಾಶ ಕ್ಷೀಣವಾಗಿದೆ. 13 ಪಂದ್ಯಗಳಿಂದ ಕೆಕೆಆರ್ ಗೆಲುವು ಕಂಡಿದ್ದು 6 ರಲ್ಲಿ. ಹೀಗಾಗಿ ಇಂದು ಗೆದ್ದರೂ ಪ್ಲೇ ಆಫ್ ಅವಕಾಶ ಕಡಿಮೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.