ನಟಿ ಕೀರ್ತಿ ಸುರೇಶ್ ಮಾಂಗಲ್ಯಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ

Sampriya

ಗುರುವಾರ, 19 ಡಿಸೆಂಬರ್ 2024 (19:55 IST)
Photo Courtesy X
ದಕ್ಷಿಣ ಭಾರತದ ಖ್ಯಾತ ಕೀರ್ತಿ ಸುರೇಶ್ ಮದುವೆಯ ನಂತರ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಅವರು ಇದೀಗ ಮಾಂಗಲ್ಯಕ್ಕೆ ನೀಡುವ ಗೌರವದ ವಿಚಾರದಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.

ಬೇಬಿ ಜಾನ್ ಸಿನಿಮಾ ತಂಡದೊಂದಿಗೆ ಮದುವೆ ನಂತರ ಕಾಣಿಸಿಕೊಂಡ ಕೀರ್ತಿ ಸುರೇಶ್ ಅವರು ಮಾಡ್ರನ್ ಡ್ರೆಸ್‌ನೊಂದಿಗೆ ಮಾಂಗಲ್ಯದೊಂದಿಗೆ ಕಾಣಿಸಿಕೊಂಡರು.

ಈಚೆಗೆ ಬೇಬಿ ಜಾನ್ ತಂಡವು ಚಿತ್ರದ ಪ್ರಚಾರಕ್ಕಾಗಿ ಮುಂಬೈನಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಆಯೋಜಿಸಿತ್ತು. ನವವಿವಾಹಿತೆ ಕೀರ್ತಿ ಸುರೇಶ್ ಕೂಡ ತಮ್ಮ ಸಹನಟರಾದ ವರುಣ್ ಧವನ್ ಮತ್ತು ವಾಮಿಕಾ ಗಬ್ಬಿ ಅವರೊಂದಿಗೆ ಕಾಣಿಸಿಕೊಂಡರು.

ಈ ವೇಳೆ ಕೀರ್ತಿ ಕೆಂಪು ಬಣ್ಣದ ಮಾಡ್ರನ್ ಡ್ರೆಸ್‌ನಲ್ಲಿ ಮಿಂಚಿದರು.  ಇತ್ತೀಚೆಗಷ್ಟೇ ಗೋವಾದಲ್ಲಿ ನಡೆದ ಬಹುಕಾಲದ ಗೆಳೆಯ ಅನೋನಿ ತಟ್ಟಿಲ್ ಅವರನ್ನು ಕೀರ್ತಿ ಸುರೇಶ್ ಕೈ ಹಿಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ