ಕೀರ್ತಿ ಸುರೇಶ್ ಮದುವೆ ಸಂಭ್ರಮದಲ್ಲಿ ದಳಪತಿ ವಿಜಯ್ ಭಾಗಿ: ಫೋಟೊ ಹಂಚಿಕೊಂಡ ಮಹಾನಟಿ

Sampriya

ಗುರುವಾರ, 19 ಡಿಸೆಂಬರ್ 2024 (14:07 IST)
Photo Courtesy X
ಗೋವಾ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಹಾನಟಿ ಕೀರ್ತಿ ಸುರೇಶ್ ಅವರು ಡಿ.12ರಂದು ತಮ್ಮ ಬಾಲ್ಯದ ಗೆಳೆಯ ಆ್ಯಂಟೋನಿ ಜೊತೆ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಸಂಭ್ರಮದಲ್ಲಿ ಸ್ಟಾರ್ ನಟ ದಳಪತಿ ವಿಜಯ್ ಸೇರಿದಂತೆ ಹಲವು ಸ್ಟಾರ್‌ಗಳು ಭಾಗಿಯಾಗಿದ್ದರು.

ಮದುವೆ ಸಂಭ್ರಮದಲ್ಲಿ ವಿಜಯ್‌ ಭಾಗಿಯಾಗಿ ಶುಭಹಾರೈಸಿದ್ದರ ಬಗ್ಗೆ ಫೋಟೋ ಶೇರ್ ಮಾಡಿ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.  ನನ್ನ ಕನಸಿನ ಮದುವೆಯಲ್ಲಿ ನಮ್ಮ ಡ್ರೀಮ್ ಐಕಾನ್ ನಮ್ಮನ್ನು ಆಶೀರ್ವದಿಸಿದಾಗ ಎಂದು ನಟಿ ಅಡಿಬರಹ ನೀಡಿ, ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ

ಇನ್ನೂ ವಿಜಯ್ ಮತ್ತು ಕೀರ್ತಿ ಸುರೇಶ್ ನಡುವೆ ಉತ್ತಮ ಒಡನಾಟವಿದೆ. ಕಾಲಿವುಡ್‌ನ ಹಿಟ್‌ ಸಿನಿಮಾಗಳಾದ ಭೈರವ ಮತ್ತು ಸರ್ಕಾರ್ ಸಿನಿಮಾಗಳಲ್ಲಿ ವಿಜಯ್‌ಗೆ ಕೀರ್ತಿ ನಾಯಕಿಯಾಗಿ ನಟಿಸಿದರು.

ಅಂದಹಾಗೆ, ಆ್ಯಂಟೋನಿ ತಟ್ಟಿಲ್ ಮತ್ತು ಕೀರ್ತಿ 15 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಹಿಂದೂ ಮತ್ತು ಕ್ರೈಸ್ತ ಪದ್ಧತಿಯಂತೆ ಮದುವೆಯಾದರು. ಕುಟುಂಬಸ್ಥರು ಮತ್ತು ನಟಿಯ ಆಪ್ತ ಕಲಾವಿದರು ಈ ಮದುವೆಯಲ್ಲಿ ಭಾಗಿಯಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ