“ಇಎಂಕೆ” ಟಿವಿ ಶೋ ಕಾರ್ಯಕ್ರಮಕ್ಕೆ ನಟ ಜೂನಿಯರ್ ಎನ್ ಟಿಆರ್ ಪಡೆದ ಸಂಭಾವನೆ ಎಷ್ಟು ಗೊತ್ತಾ?

ಶುಕ್ರವಾರ, 19 ಮಾರ್ಚ್ 2021 (12:35 IST)
ಹೈದರಾಬಾದ್ : ಟಾಲಿವುಡ್ ನಟ ಜೂನಿಯರ್ ಎನ್ ಟಿಆರ್ ಅವರು ತೆಲುಗು ಆವೃತ್ತಿಯ ಮುಂಬರುವ ಟಿವಿ ಶೋ “ಎವಾರು ಮೀಲೋ ಕೋಟೀಸ್ ವುರುಲು” ಯೊಂದಿಗೆ ಕಿರುತೆರೆಗೆ ಬರಲಿದ್ದಾರೆ.

ಇತ್ತೀಚೆಗೆ ಇದರ ಟೀಸರ್ ಬಿಡುಗಡೆಯಾಗಿದ್ದು, ಮೇ ಮೊದಲ ವಾರದಲ್ಲಿ ಪ್ರಸಾರವಾಗಲಿದೆ. ಈ ಕಾರ್ಯಕ್ರಮವನ್ನು ಜೂನಿಯರ್ ಎನ್ ಟಿಆರ್ ನಡೆಸು ಕೊಡುತ್ತಿರುವ ಹಿನ್ನಲೆಯಲ್ಲಿ ಅದಕ್ಕಾಗಿ ಅವರು 10ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇಎಂಕೆ 60 ಕ್ಕೂ ಹೆಚ್ಚು ಸಂಚಿಕೆಗಳನ್ನು ಹೊಂದಿರುತ್ತದೆ ಎನ್ನಲಾಗಿದೆ.

ಈ ಹಿಂದೆ ಈ ಕಾರ್ಯಕ್ರಮವನ್ನು ನಾಗಾರ್ಜುನ್ ಅವರು ನಡೆಸಿಕೊಟ್ಟಿದ್ದು, ಆ ವೇಳೆ ನಾಗಾರ್ಜುನ್ ಅವರು 4.5 ಕೋಟಿ ಸಂಭಾವನೆ ಪಡೆದಿದ್ದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ