ಸ್ಯಾಂಡಲ್ ವುಡ್ ತಾರೆಯರು ಡ್ರಗ್ಸ್ ತರಿಸಿಕೊಳ್ಳುತ್ತಿದ್ದುದು ಹೇಗೆ ಗೊತ್ತಾ?!

ಶುಕ್ರವಾರ, 28 ಆಗಸ್ಟ್ 2020 (09:39 IST)
ಬೆಂಗಳೂರು: ನಗರದ ವಿವಿಧೆಡೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಗ್ಯಾಂಗ್ ನ್ನು ಎನ್ ಸಿಬಿ ಅಧಿಕಾರಿಗಳು ಬೇಧಿಸಿದ ಬೆನ್ನಲ್ಲೇ ಹಲವು ಆಘಾತಕಾರೀ ಸುದ್ದಿಗಳು ಹೊರಬೀಳುತ್ತಿವೆ.


ಸ್ಯಾಂಡಲ್  ವುಡ್ ತಾರೆಯರೇ ಈ ಖದೀಮರಿಂದ ಡ್ರಗ್ಸ್ ವ್ಯವಹಾರ ಮಾಡುತ್ತಿದ್ದ ಪ್ರಮುಖರು ಎಂದು ತಿಳಿದುಬಂದಿದೆ. ಬಂಧಿತ ಆರೋಪಿಗಳು ಸುಮಾರು 30 ಕ್ಕೂ ಹೆಚ್ಚು ಪ್ರತಿಷ್ಠಿತರ ಹೆಸರು ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಇವರೆಲ್ಲರೂ ಆನ್ ಲೈನ್ ಮೂಲಕವೇ ಈ ಆರೋಪಿಗಳಿಗೆ ಹಣ ಪಾವತಿಸಿ ಡ್ರಗ್ಸ್ ಪಡೆದುಕೊಳ್ಳುತ್ತಿದ್ದರು. ಅದರಲ್ಲೂ ಲಾಕ್ ಡೌನ್ ಅವಧಿಯಲ್ಲಿ ಹೆಚ್ಚು ಇವರ ವ್ಯವಹಾರ ಕುದುರಿತ್ತು ಎನ್ನಲಾಗಿದೆ. ಇದೀಗ ಆರೋಪಿಗಳು ಬಾಯಿಬಿಟ್ಟ ಹೆಸರಿನ ‘ಪ್ರತಿಷ್ಠಿತರ’ನ್ನು ಅಧಿಕಾರಿಗಳು ತನಿಖೆ ನಡೆಸುವುದು ಖಚಿತವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ