ಅಂಬರೀಶ್ ಅವರು ರಾಜ್ಯ ಸಚಿವ ಸಂಪುಟದಿಂದ ಕೈ ಬಿಟ್ಟಿದ್ದಕ್ಕೆ ಕನ್ನಡ ಚಿತ್ರರಂಗದಲ್ಲಿ ಭಾರೀ ವ್ಯಕ್ತವಾಗುತ್ತಿರೋದು ಗೊತ್ತೇ ಇದೆ. ಅನೇಕ ನಿರ್ಮಾಪಕರು, ನಟರು, ನಿರ್ದೇಶಕರುಗಲು ಅಂಬಿ ಪರವಾಗಿ ಧ್ವನಿ ಎತ್ತಿದ್ದರು. ಇದೀಗ ಸ್ಯಾಂಡಲ್ ವುಡ್ ನ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ಅವರು ಅಂಬರೀಶ್ ಪರ ಬ್ಯಾಟ್ ಬೀಸಿದ್ದಾರೆ.
ಅಂದ್ಹಾಗೆ ಹುಚ್ಚ ವೆಂಕಟ್ ಅವರು ಅಂಬರೀಶ್ ಅವರ ಪರವಾಗಿ ಮಾತನಾಡಿದ್ದಾರೆ ಅನ್ನೋದೇನೋ ನಿಜ.ಆದ್ರೆ ಅದಕ್ಕಿಂತ ಮುಖ್ಯವಾದ ವಿಚಾರ ಅಂದ್ರೆ ವೆಂಕಟ್ ನಟಿ ರಮ್ಯಾ ಅವರ ವಿರುದ್ಧ ಗುಡುಗಿದ್ದಾರೆ. ಅಂಬರೀಶ್ ಅವರು ಮಂಡ್ಯದಲ್ಲೇ ಹುಟ್ಟಿದವರು ಅವರು ಅಲ್ಲೇ ಇದ್ದವರು. ಅವರು ಮಂಡ್ಯಕ್ಕಾಗಿ ಸಾಕಷ್ಟು ಮಾಡಿದ್ದಾರೆ. ಆದ್ರೆ ರಮ್ಯಾ ವರು ಮಂಡ್ಯಕ್ಕೆ ಏನ್ ಮಾಡಿದ್ದಾರೆ ಅಂತಾ ಹೇಳೋ ಮೂಲಕ ಸುಖಾ ಸುಮ್ಮನೆ ವೆಂಕಟ್ ರಮ್ಯಾ ವೈರತ್ವವನ್ನು ಕಟ್ಟಿಕೊಂಡಿದ್ದಾರೆ.ಅಲ್ಲದೇ ರಮ್ಯಾ ಅವರು ಲಂಡನ್ ನಲ್ಲಿ ಇದ್ದು ಈಗ ವಾಪಸ್ ಬಂದವರು ಅವರಿಗೆ ಮಂಡ್ಯದ ಬಗ್ಗೆ ಹೆಚ್ಚೇನು ಗೊತ್ತಿಲ್ಲ ಅಂತಾ ಅವರು ಹೇಳಿದ್ದಾರೆ.
ಇನ್ನು ಇಷ್ಟು ದಿನ ಲಂಡನ್ ನಲ್ಲಿ ಇದ್ದು ಈಗ ಮಂಡ್ಯಕ್ಕೆ ಬಂದು ಮನೆ ಮಾಡಿದ್ರೆ ನೀವು ಮಂಡ್ಯದವರು ಆಗೋದಕ್ಕೆ ಸಾಧ್ಯವಿಲ್ಲ. ಮಂಡ್ಯದ ಜನಕ್ಕ ನೀವೇನು ಮಾಡಿದ್ದೀರಿ ಅಂತಾ ಕೇಳಿದ್ದಾರೆ. ಹಿಂದೆ ರಮ್ಯಾ ಅವರ ತಾಯಿ ರಂಜಿತಾ ಅವರು ರಮ್ಯಾ ಅವರು ಸೋತ್ರು ಅವರು ಮಂಡ್ಯದಲ್ಲೇ ಇರುತ್ತಾರೆ ಅಂತಾ ಹೇಳಿದ್ರು.ಆದ್ರೆ ಅವರು ಸೋತ ಬಳಿಕ ಯಾಕೆ ಲಂಡನ್ ಹೋದ್ರು ಅಂತಾ ಪ್ರಶ್ನಿಸಿದ್ದಾರೆ. ಅಲ್ಲದೇ ಲಂಡನ್ ನಲ್ಲಿ ಎಷ್ಟು ಏರಿಯಾ ಇದೆ ಅನ್ನೋದು ರಮ್ಯಾ ಅವರಿಗೆ ಗೊತ್ತಿದೆ.ಆದ್ರೆ ಮಂಡ್ಯದಲ್ಲಿರುವ ಏರಿಯಾಗಳೇ ಅವರಿಗೆ ಗೊತ್ತಿಲ್ಲ ಅಂತಾ ವ್ಯಂಗ್ಯವಾಡಿದ್ದಾರೆ.ಆ ಮೂಲಕ ಇಲ್ಲದ ವಿವಾದವನ್ನು ತಲೆ ಮೇಲೆ ಎಳೆದುಕೊಂಡಿದ್ದಾರೆ ವೆಂಕಟ್.