ತಮಿಳು ಮತ್ತು ತೆಲುಗಿನ ಈ ನಾಯಕರಿಬ್ಬರಿಗೆ ಬೋನಿ ಕಪೂರ್ ಪಾರ್ಟಿ ನೀಡಿದ್ದು ನಿಜನಾ?

ಶುಕ್ರವಾರ, 27 ನವೆಂಬರ್ 2020 (08:11 IST)
ಹೈದರಾಬಾದ್ : ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ‍ಪ್ರಸ್ತುತ ಅಜಿತ್ ನಾಯಕರಾಗಿರುವ ತಮಿಳು ಚಿತ್ರವನನ್ಉ ನಿರರ್ಮಿಸುತ್ತಿದ್ದಾರೆ. ಈ ಹಿಂದೆ ಬೋನಿ ಕಪೂರ್ ಅಜಿತ್ ನಾಯಕನಾಗಿ ನಟಿಸಿದ ಪಿಂಕ್ ತಮಿಳು ಚಿತ್ರವನ್ನುನಿರ್ಮಿಸಿದ್ದರು. ಇದೀಗ ಅದೇ ಪಿಂಕ್ ಚಿತ್ರ ಪವನ್ ಕಲ್ಯಾಣ ಅಭಿನಯದಲ್ಲಿ ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ.

ಬೋನಿ ಕಪೂರ್ ಪವನ್ ಕಲ್ಯಾಣ್ ಅವರ ವಕೀಲ್ ಸಾಬ್ ಚಿತ್ರದ ನಿರ್ಮಾಣದ ಪಾಲುದಾರರಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಹಾಗೇ ಇನ್ನೊಂದು ಕಡೆ ಅಜಿತ್ ತಮಿಳು ಚಿತ್ರ ಕೂಡ ಹೈದರಾಬಾದ್ ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಹೈದರಾಬಾದ್ ಗೆ ಆಗಮಿಸಿದ ಬೋನಿ ಕಪೂರ್ ಇಬ್ಬರ ನಾಯಕರಾದ ಅಜಿತ್ ಮತ್ತು ಪವನ್ ಅವರಿಗೆ ಪಾರ್ಟಿ ನೀಡಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರವಾಗಿದೆ ಎನ್ನಲಾಗಿದೆ.

ಆದರೆ ಬೋನಿ ಕಪೂರ್ ಯಾವುದೇ ಪಾರ್ಟಿ ನೀಡಿಲ್ಲ. ಈ ಸುದ್ದಿ ಸುಳ್ಳು ಎಂದು  ಪಿಆರ್ ತಂಡ ಹೇಳಿದೆ. ಅಲ್ಲದೇ ಈ ಬಗ್ಗೆ ಪವನ್ ಕಲ್ಯಾಣ ಅಭಿಮಾನಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ