ಬೆಂಗಳೂರು: ಕನ್ನಡ ಸಿನಿಮಾವನ್ನು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಿದ ಇಬ್ಬರು ನಟರೆಂದರೆ ರಾಕಿಂಗ್ ಸ್ಟಾರ್ ಯಶ್ ಮತ್ತು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ.
ಇದೀಗ ಮತ್ತೊಮ್ಮೆ ಇಬ್ಬರೂ ಒಂದೇ ಬಾರಿಗೆ ಮತ್ತೊಂದು ಅದ್ಧೂರಿ ಸಿನಿಮಾ ಮಾಡಲು ಹೊರಟಿದ್ದಾರೆ. ಇಬ್ಬರೂ ಒಂದೇ ರೀತಿಯ ಹೇರ್ ಸ್ಟೈಲ್ ಮಾಡಿಕೊಂಡಿದ್ದಾರೆ. ಯಶ್ ಕೆಜಿಎಫ್ ಬಳಿಕ ಉದ್ದ ಗಡ್ಡ, ಕೂದಲಿಗೆ ಕತ್ತರಿಯೇ ಹಾಕಿಲ್ಲ. ಇದೀಗ ರಿಷಬ್ ಕೂಡಾ ಕಾಂತಾರ ಚಾಪ್ಟರ್ 1 ಸಿನಿಮಾಗಾಗಿ ಉದ್ದ ಕೂದಲು, ಗಡ್ಡ ಬಿಟ್ಟುಕೊಂಡಿದ್ದಾರೆ.
ರಿಷಬ್ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಲೇಟೆಸ್ಟ್ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ರಿಷಬ್ ಸ್ಟೈಲ್, ನಿಂತ ಭಂಗಿ ನೋಡಿ ನೆಟ್ಟಿಗರು ಒಂದ ಕ್ಷಣ ಇದು ಯಶ್ ಫೋಟೋನಾ ಎಂದು ಒಂದು ಕ್ಷಣ ಕನ್ ಫ್ಯೂಸ್ ಮಾಡಿಕೊಂಡರು.
ಬಹುಶಃ ಥಟ್ಟನೇ ಈ ಫೋಟೋ ನೋಡಿದರೆ ಯಶ್ ಥರಾನೇ ಕಾಣುತ್ತಿದ್ದಾರೆ. ಕಾಂತಾರ ಚಾಪ್ಟರ್ 1 ಕ್ಕಾಗಿ ರಿಷಬ್ ವರ್ಕೌಟ್ ಮಾಡುತ್ತಿರುವ ರಿಷಬ್, ತಮ್ಮ ಲುಕ್, ಸ್ಟೈಲ್ ನಿಂದಲೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ.