ಮಾಸ್ಟರ್ ಚಿತ್ರ ಒಟಿಡಿಯಲ್ಲಿ ಬಿಡುಗಡೆಯಾಗುತ್ತಿರುವುದು ನಿಜನಾ? ಈ ಬಗ್ಗೆ ನಿರ್ಮಾಪಕರು ಹೇಳಿದ್ದೇನು?

ಸೋಮವಾರ, 30 ನವೆಂಬರ್ 2020 (08:25 IST)
ಚೆನ್ನೈ : ಮಾಸ್ಟರ್ ಚಿತ್ರದಲ್ಲಿ ವಿಜಯ್ ಮತ್ತು  ವಿಜಯ್ ಸೇತುಪತಿ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದಾರೆ, ಖೈದಿ ಚಿತ್ರದ ನಂತರ ಲೋಕೇಶ್ ಕನಗರಾಜ್ ಅವರು ಮಾಸ್ಟರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಕೆಲವು ತಿಂಗಳ ಹಿಂದೆ ಕಾಲಿವುಡ್ ವಯಲಗಳಲ್ಲಿ ಮಾಸ್ಟರ್ ಮೂವಿ ನೆಟ್ ಫ್ಲಿಕ್ಸ್ ಅಥವಾ ಅಮೆಜಾನ್ ಪ್ರೈಮ್ ನಲ್ಲಿ ಇಡುಗಡೆಯಾಗಲಿದೆ ಎಂದು ವರದಿಯಾಗಿದೆ. ಆದರೆ ಇದು ಕೇವಲ ವದಂತಿಯಂದು ನಿರ್ದೇಶಕ ಲೋಕೇಶ್ ಕನಗರಾಜ್ ಮತ್ತು ನಿರ್ಮಾಪಕ ಲಲಿತ್ ಕುಮಾರ್ ತಿಳಿಸಿದ್ದಾರೆ.

ಮಾಸ್ಟರ್ ಚಿತ್ರದ ಡಿಜಿಟಲ್ ಹಕ್ಕುಗಳು ಜನಪ್ರಿಯ ಓಟಿಡಿ ಸೈಟ್ ನೆಟ್ ಫ್ಲಿಕ್ಸ್ ಗೆ ಹಲವಾರು ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿದೆ. ಮಾಸ್ಟರ್ ಚಿತ್ರವನ್ನು ನೇರವಾಗಿ ಒಟಿಡಿ ಅಥವಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡೇಕೆ ಎಂದು ಇನ್ನೂ ನಿರ್ಧರಿಸಿಲ್ಲ ಎಂದು ನಿರ್ಮಾಪಕರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ