ನಯನತಾರಾ ನೆಟ್ರಿಕನ್ ಚಿತ್ರದ ಟೀಸರ್ ಗೆ ಸಿಕ್ಕ ಪ್ರತಿಕ್ರಿಯೆ ಎಷ್ಟು ಗೊತ್ತಾ?

ಶನಿವಾರ, 28 ನವೆಂಬರ್ 2020 (10:09 IST)
ಚೆನ್ನೈ : ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಅಭಿನಯದ ನೆಟ್ರಿಕನ್ ಚಿತ್ರದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎನ್ನಲಾಗಿದೆ.

ನಟಿ ನಯನತಾರಾ ಅಭಿನಯದ ನೆಟ್ರಿಕನ್ ಚಿತ್ರವನ್ನು ನಯನತಾರಾ ಗೆಳೆಯ ವಿಘ್ನೇಶ್ ಶಿವನ್ ನಿರ್ಮಿಸಿದ್ದಾರೆ, ನಿರ್ದೇಶಕ ಮಿಲಿಂದ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗೆ ನಟ ನಯನತಾರಾ  ಹುಟ್ಟುಹಬ್ಬದಂದು  ಅವರ ಗೆಳೆಯ ವಿಘ್ನೇಶ್ ಬರ್ತಡೇ ಸರ್ಪ್ರೈಸ್ ಆಗಿ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

ಇದರಲ್ಲಿ ನಯನತಾರಾ ದೃಷ್ಟಿಹೀನ ವ್ಯಕ್ತಿಯಾಗಿ ನಟಿಸಿದ್ದು, ಇದರ ಟೀಸರ್  ಪ್ರಸ್ತುತ 4 ಮಿಲಿಯನ್ ವೀವ್ಸ್ ನ್ನು ಪಡೆದುಕೊಂಡಿದೆ ಎಂಬುದಾಗಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ