ಮತ್ತೆ ಶುರುವಾಯ್ತು ಶೈನ್ ಶೆಟ್ಟಿ-ಸಂಗೀತಾ ಮದುವೆ ಸುದ್ದಿ!

ಮಂಗಳವಾರ, 3 ನವೆಂಬರ್ 2020 (09:26 IST)
ಬೆಂಗಳೂರು: ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ಜೀ ಕನ್ನಡದ ಸರಿಗಮಪ ತೀರ್ಪುಗಾರರಲ್ಲೊಬ್ಬರಾದ ಗಾಯಕಿ ಸಂಗೀತಾ ಜತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಓಡಾಡಿತ್ತು.


ಆದರೆ ಆಗ ಇಬ್ಬರೂ ಹೊಸದೊಂದು ಆಲ್ಬಮ್ ಗಾಗಿ ಜತೆಯಾಗಿ ನಟಿಸಿದ ಸುದ್ದಿಯನ್ನು ಹೇಳಿ ಕೆಲವು ದಿನಗಳ ಮಟ್ಟಿಗೆ ಅಭಿಮಾನಿಗಳನ್ನು ಸುಮ್ಮನಾಗಿಸಿದ್ದರು. ಇದೀಗ ಮತ್ತೆ ಇಬ್ಬರ ನಡುವೆ ಸಮ್ ಥಿಂಗ್ ಇದೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಕಾರಣ ಸಂಗೀತಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಕೈಯಲ್ಲಿ ಉಂಗುರ ತೋರಿಸಿ ಪ್ರಶ್ನಾರ್ಥಕ ಚಿಹ್ನೆ ಹಾಕಿದ್ದಲ್ಲದೆ, ನಾಳೆ ಎಲ್ಲಾ ರಿವೀಲ್ ಮಾಡ್ತೀನಿ ಎಂದು ಪೋಸ್ಟ್ ಹಾಕಿದ್ದಾರೆ. ಇದನ್ನು ನೋಡಿ ನೆಟ್ಟಿಗರು ಇದೇನು ನಿಶ್ಚಿತಾರ್ಥದ ಉಂಗುರನಾ? ನೀವು ಶೈನ್ ಶೆಟ್ಟಿ ಜತೆ ಮದುವೆಯಾಗ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಂದೆಡೆ ಶೈನ್ ಇನ್ ಸ್ಟಾಗ್ರಾಂ ಪುಟದಲ್ಲಿ ಗೆಳೆಯ ವಾಸುಕಿ ವೈಭವ್ ಜತೆಗಿನ ವಿಡಿಯೋ ಒಂದನ್ನು ಪ್ರಕಟಿಸಿ ‘ಏನಿದು ಸಂಭ್ರಮ’ ಎಂದು ಬರೆದುಕೊಂಡಿದ್ದಾರೆ. ಇದನ್ನೆಲ್ಲಾ ನೋಡಿದ ಅಭಿಮಾನಿಗಳು ಮತ್ತೆ ಇಬ್ಬರ ಮದುವೆ ಸುದ್ದಿ ಇರಬಹುದಾ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಎಲ್ಲದಕ್ಕೂ ಇಂದು ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ