ಸ್ಯಾಂಡಲ್ ವುಡ್ ನಟರ ಆದಾಯದ ಬಗ್ಗೆ ಐಟಿ ಅಧಿಕಾರಿಗಳಿಗೆ ಸುಳಿವು ಕೊಟ್ಟವರು ಯಾರು ಗೊತ್ತೇ?!
ಜಯಣ್ಣ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ ಡೈರಿ ಸಿಕ್ಕಿತ್ತು. ಈ ಡೈರಿಯಲ್ಲಿ ಸ್ಟಾರ್ ನಟರ ಆದಾಯ, ಸಿನಿಮಾಗಳ ಮೇಲೆ ಮಾಡಲಾಗಿದ್ದ ಹೂಡಿಕೆ ಕುರಿತಾದ ಮಾಹಿತಿಯಿತ್ತು ಎನ್ನಲಾಗಿದೆ.
ಇದೇ ಸುಳಿವು ಇಟ್ಟುಕೊಂಡು ಐಟಿ ಅಧಿಕಾರಿಗಳು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ನಟಿಸಿರುವ ನಟರು ಮತ್ತು ನಿರ್ಮಾಪಕರನ್ನೇ ಕೇಂದ್ರವಾಗಿಟ್ಟುಕೊಂಡು ದಾಳಿ ಮಾಡಲಾಗಿದೆ ಎಂಬ ಸುದ್ದಿ ಬಂದಿದೆ.