ತಾಯಿಯ ಆಸೆಯನ್ನು ಈಡೇರಿಸಿದ ನಟ ಜಗ್ಗೇಶ್

ಮಂಗಳವಾರ, 4 ಡಿಸೆಂಬರ್ 2018 (07:15 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ನವರಸ ನಾಯಕ ಜಗ್ಗೇಶ್ ಅವರು ತಮ್ಮ ತಾಯಿಯ ಆಸೆಯಂತೆ ತಮ್ಮ ಹುಟ್ಟೂರಿನಲ್ಲಿ ತಮ್ಮ ಪೂರ್ವಿಕರ ದೇವಸ್ಥಾನವೊಂದನ್ನು ಜೀರ್ಣೋದ್ಧಾರ ಮಾಡಿಸಿದ್ದಾರೆ.


ಹೌದು. ಜಗ್ಗೇಶ್ ಅವರ ತಾಯಿ ನಂಜಮ್ಮ ಧೈವಭಕ್ತೆಯಾಗಿದ್ದು, ತನ್ನ ಮಗ ಸಾರ್ವಜನಿಕರಿಗೆ ಉಪಯೋಗವಾಗುವ ಸಮುದಾಯ ಭವನ, ದೇವಾಲಯಗಳನ್ನು ಕಟ್ಟಿಸಬೇಕೆಂಬ ಆಸೆಯನ್ನು ಹೊಂದಿದ್ದರು. ಇದೀಗ ತಾಯಿಯ ಆಸೆಯಂತೆ ನಟ ಜಗ್ಗೇಶ್ ಅವರು ತಮ್ಮ ಸ್ವಗ್ರಾಮದಲ್ಲಿ ಕಾಲಭೈರವನ ದೇವಾಲಯೊಂದನ್ನು ನಿರ್ಮಿಸಿದ್ದಾರೆ.


ಈ ಬಗ್ಗೆ ಟ್ವೀಟರ್ ನಲ್ಲಿ ಬರೆದುಕೊಂಡಿರುವ ಜಗ್ಗೇಶ್, ನನ್ನಂತ ಪಾಮರನ ಕೈಯಲ್ಲಿ ಈ ಕಾರ್ಯ ಮಾಡಿಸಿದ ದೈವಕ್ಕೆ ಧನ್ಯೋಸ್ಮಿ ಎಂದಿದ್ದಾರೆ. ಈ ಕಾರ್ಯ ಮಾಡುವ ಮೂಲಕ ತಾತಂದಿರು, ತಂದೆ-ತಾಯಿ ಆತ್ಮಕ್ಕೆ ಶಾಂತಿ ಸಮಾಧಾನ ಸಂತೋಷ ನೀಡಲು ಅವರ ಮಗನಾಗಿ, ವಂಶೀಕನಾಗಿ ಸಾರ್ಥಕ ಅನಿಸಿತು ನನ್ನ ಬದುಕು. ಈ ಕಾರ್ಯಕ್ಕೆ ನನ್ನ ಕಲಾಕರ್ತವ್ಯದ ದುಡಿಮೆ ಹಾಗೂ ಅಭಿಮಾನಿಗಳ ಚಪ್ಪಾಳೆ ಕಾರಣ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ