ಕೊವಿಡ್ ಹೆಸರಿನಲ್ಲಿ ಹಣ ಪೀಕಿದವರ ಬಗ್ಗೆ ಹೇಳಿಕೊಂಡ ಜಗ್ಗೇಶ್

ಮಂಗಳವಾರ, 4 ಮೇ 2021 (09:46 IST)
ಬೆಂಗಳೂರು: ಕೊರೋನಾ ಪರಿಹಾರ ಹೆಸರಿನಲ್ಲಿ ಹಣ ಪೀಕುವವರ ಬಗ್ಗೆ ನವರಸನಾಯಕ ಜಗ್ಗೇಶ್ ಎಚ್ಚರವಾಗಿರುವಂತೆ ಹೇಳಿದ್ದಾರೆ.


ಕೊವಿಡ್ ಹೆಸರಿನಲ್ಲಿ ಅಮಾಯಕರಿಂದ ಹಣ ಪೀಕುವವರ ಬಗ್ಗೆ ಎಚ್ಚರಿಕೆಯಿಂದಿರಿ. ಆನ್ ಲೈನ್ ಮೂಲಕ ವಂಚನೆ ನಡೆಯುತ್ತಿದೆ ಎಂದು ಜಗ್ಗೇಶ್ ಎಚ್ಚರಿಕೆ ನೀಡಿದ್ದಾರೆ.

‘ಆತ್ಮೀಯರೇ ಎಚ್ಚರ. ಕೆಲವರು ಕೊವಿಡ್ ಸಂಕಷ್ಟದಲ್ಲಿ ಇರುವ ಅಮಾಯಕರ ಫೋಟೋ ಹಾಕಿ ಸಹಾಯ ಕೇಳುವಂತೆ ಗೂಗಲ್ ಪೇ ಮಾಡಿ ಎಂದು ಬೇಡಿ ಆನ್ ಲೈನ್ ದರೋಡೆ ಮಾಡುತ್ತಿದ್ದಾರೆ. ನನ್ನ ಚಿಕ್ಕಮ್ಮನ ಮಗ ಇಂದು ಅವನು 8 ತಿಂಗಳಿನಿಂದ ಕೂಡಿಟ್ಟ ಸಂಪಾದನೆ ಕಳೆದುಕೊಂಡ. ಪ್ರಮಾಣಿಸಿ ಪರೀಕ್ಷಿಸಿ ಪ್ರತಿಕ್ರಿಯಿಸಿ. ತಕ್ಷಣವೇ ಪ್ರತಿಕ್ರಿಯಿಸಬೇಡಿ’ ಎಂದು ಜಗ್ಗೇಶ್ ಎಚ್ಚರಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ