ತಮಿಳಿನಾಡಿನ ಬಡ ಮಕ್ಕಳಿಗೆ ನೆರವಾದ ಕಿಚ್ಚ ಸುದೀಪ್

ಮಂಗಳವಾರ, 4 ಮೇ 2021 (09:36 IST)
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಮ್ಮ ಫೌಂಡೇಷನ್ ಮೂಲಕ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಎಲ್ಲರಿಗೂ ಗೊತ್ತೇ ಇದೆ.


ಇದೀಗ ಕಿಚ್ಚ ಸುದೀಪ್ ತಮಿಳುನಾಡಿನಲ್ಲಿ ಬಡ ಮಕ್ಕಳಿಗೆ ನೆರವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮಿಳುನಾಡು ಸುತ್ತಮುತ್ತ ಬಡತನ ರೇಖೆಗಿಂತ ಕೆಳಗಿರುವ ಮಕ್ಕಳಿಗೆ ‘ತಗ್ಮಾ ಫೌಂಡೇಷನ್’ ಜೊತೆ ಕೈ ಜೋಡಿಸಿರುವ ಸುದೀಪ್ ಆಹಾರ ಒದಗಿಸಿದ್ದಾರೆ.

ಮೊದಲು ಮಾನವನಾಗು ಎಂಬ ಧ್ಯೇಯ ವಾಕ್ಯದೊಂದಿಗೆ ಕಿಚ್ಚ ಸುದೀಪ್ ಚ್ಯಾರಿಟೇಬಲ್‍ ಟ್ರಸ್ಟ್ ಇದುವರೆಗೆ ಹಲವು ಸಾಮಾಜಿಕ ಕೆಲಸ ಮಾಡಿದೆ. ತಮ್ಮ ಹೆಸರಿನಲ್ಲಿ ಚ್ಯಾರಿಟೇಬಲ್ ಟ್ರಸ್ಟ್ ಮಾಡಿದ ಒಳ್ಳೆಯ ಕೆಲಸವನ್ನು ಸುದೀಪ್ ಕೂಡಾ ಸ್ವಾಗತಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ