ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೊರೋನಾ ಆತಂಕ: ಇಬ್ಬರಿಗೆ ಸೋಂಕು

ಮಂಗಳವಾರ, 4 ಮೇ 2021 (09:39 IST)
ನವದೆಹಲಿ: ಐಪಿಎಲ್ 14 ರಲ್ಲಿ ಭಾಗಿಯಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಆತಂಕ ಮನೆ ಮಾಡಿದೆ.


ಬೌಲಿಂಗ್ ಕೋಚ್ ಎಲ್ ಬಾಲಾಜಿ, ಸಿಇಒ ಕಾಶಿ ವಿಶ್ವನಾಥನ್ ಗೆ ಕೊರೋನಾ ಸೋಂಕು ತಗುಲಿದೆ. ಆದರೆ ಕ್ರಿಕೆಟಿಗರಿಗೆ ಯಾರಿಗೂ ಸೋಂಕು ತಗುಲಿಲ್ಲ.

ಕೂಟ ಆರಂಭಕ್ಕೂ ಮುನ್ನವೇ ಚೆನ್ನೈ ತಂಡದ ಇಬ್ಬರಲ್ಲಿ ಕೊರೋನಾ ಸೋಂಕು ತಗುಲಿತ್ತು. ಆದರೆ ಟೂರ್ನಿ ಆರಂಭವಾದ ಬಳಿಕ ಇದುವರೆಗೆ ಯಾರಿಗೂ ಹೊಸದಾಗಿ ಕೊರೋನಾ ತಗುಲಿರಲಿಲ್ಲ. ಆದರೆ ಈಗ ಸಿಎಸ್ ಕೆ ತಂಡದಲ್ಲಿ ಆತಂಕದ ಕಾರ್ಮೋಡ ಕವಿದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ