ಅಪರೂಪಕ್ಕೆ ಬೇರೆ ಚಾನೆಲ್ ಕಾರ್ಯಕ್ರಮದಲ್ಲಿ ಜಗ್ಗೇಶ್! ಬಳಿಕ ಸ್ಪಷ್ಟನೆ ಕೊಟ್ಟ ನವರಸನಾಯಕ

ಶನಿವಾರ, 7 ಸೆಪ್ಟಂಬರ್ 2019 (09:29 IST)
ಬೆಂಗಳೂರು: ನವರಸನಾಯಕ ಜಗ್ಗೇಶ್ ಜೀ ಕನ್ನಡ ವಾಹಿನಿ ಬಿಟ್ಟು ಬೇರೆ ಮನರಂಜನಾ ಚಾನೆಲ್ ಗಳ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲ್ಲ. ಆದರೆ ಅಪರೂಪಕ್ಕೆ ಕಲರ್ಸ್ ಕನ್ನಡ ವಾಹಿನಿಯ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.


ಪುನೀತ್ ರಾಜ್ ಕುಮಾರ್ ನಡೆಸಿಕೊಡುವ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಜಗ್ಗೇಶ್ ಕಾಣಿಸಿಕೊಂಡಿದ್ದೇ ತಡ, ನೀವು ಬೇರೆ ಕಾರ್ಯಕ್ರಮಗಳಲ್ಲೂ ಭಾಗವಹಿಸಿ ಎಂಬ ಆಗ್ರಹ ಕೇಳಿಬಂದಿದೆ. ಇದರ ಬೆನ್ನಲ್ಲೇ ಜಗ್ಗೇಶ್ ತಾವ್ಯಾಕೆ ಬೇರೆ ಚಾನೆಲ್ ನಲ್ಲಿ ಕಾಣಿಸಿಕೊಳ್ಳಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಜೀ ಕನ್ನಡದೊಂದಿಗೆ ಒಡಂಬಡಿಕೆ ಆಗಿರುವುದರಿಂದ ಬೇರೆ ಯಾವುದೇ ವಾಹಿನಿಯ ಮನೋರಂಜನೆ ಕಾರ್ಯಕ್ರಮದಲ್ಲಿ ನಾನು ಭಾಗವಹಿಸಲ್ಲ. ನನ್ನ ರಾಜಕೀಯ, ಖಾಸಗಿ ಜೀವನ, ಸಿನಿಮಾ ವಿಷಯ ಬಿಟ್ಟು, ದೃಶ್ಯ ಮಾಧ್ಯಮಗಳ ಹೊರತಾಗಿ ಇತರ ವಾಹಿನಿಯಲ್ಲಿ ನಾನು ಕಾಣಿಸಿಕೊಳ್ಳಲ್ಲ. ಅದಕ್ಕಾಗಿ ವಿಷಾಧವಿರಲಿ ಎಂದು ಜಗ್ಗೇಶ್ ಸ್ಪಷ್ಟನೆ ಕೊಟ್ಟಿದ್ದಾರೆ. ಕೋಟ್ಯಾಧಿಪತಿಯಲ್ಲಿ ಕುಡಿಯುವ ನೀರಿಗೆ ಸಹಾಯ ಮಾಡುವ ಸದುದ್ದೇಶದಿಂದ ಈ ವಾರ ಆಟವಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ