ಪರಭಾಷೆ ಹೀರೋಯಿನ್ ಗಳ ಸೈಡ್ ಗೆ ಹಾಕಿ ದರ್ಶನ್ ಗೆ ನಾಯಕಿಯಾಗುವ ಅವಕಾಶ ಪಡೆದ ಕನ್ನಡತಿ

ಗುರುವಾರ, 5 ಸೆಪ್ಟಂಬರ್ 2019 (09:32 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾಗೆ ಪರಭಾಷೆಯ ಖ್ಯಾತ ನಟಿಯೊಬ್ಬರನ್ನು ನಾಯಕಿಯಾಗಿ ಕರೆತರಲಾಗುತ್ತದೆ ಎಂಬ ಸುದ್ದಿಯಿತ್ತು. ಆದರೆ ಅದೀಗ ಸುಳ್ಳಾಗಿದೆ.


ನಿನ್ನೆ ಸಂಜೆ ನಿರ್ದೇಶಕ ತರುಣ್ ಸುಧೀರ್ ನಾಯಕಿಯ ಘೋಷಣೆ ಮಾಡಿದ್ದು, ಅಪ್ಪಟ ಕನ್ನಡತಿ ಆಶಾ ಭಟ್ ರನ್ನು ಆಯ್ಕೆ ಮಾಡಿರುವುದಾಗಿ ಪ್ರಕಟಿಸಿದ್ದಾರೆ.

ಮಿಸ್ ಸುಪ್ರಾ ನ್ಯಾಷನಲ್ ಆಶಾ ಭಟ್, ಅಪ್ಪಟ ಕನ್ನಡತಿಗೆ ರಾಬರ್ಟ್ ಕುಟುಂಬಕ್ಕೆ ಸ್ವಾಗತ ಎಂದು ತರುಣ‍್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ದರ್ಶನ್ ಯಾವಾಗಲೂ ಕನ್ನಡಿಗರಿಗೇ ಅವಕಾಶ ಕೊಡಬೇಕು ಎನ್ನುತ್ತಿರುತ್ತಾರೆ. ಅದೇ ರೀತಿ ಇದೀಗ ಪರಭಾಷೆ ನಾಯಕಿಯ ಮೇಲೆ ಒಲವು ತೋರದೇ ಚಿತ್ರತಂಡ ಅಪ್ಪಟ ಕನ್ನಡತಿಯನ್ನೇ ಆಯ್ಕೆ ಮಾಡಿಕೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ