ಜೈ ಭೀಮ್ ವಿವಾದ: ನಟ ಸೂರ್ಯ ಮನೆಗೆ ಭದ್ರತೆ
ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಯಾದ ಜೈ ಭೀಮ್ ಸಿನಿಮಾದಲ್ಲಿ ವೆಣ್ಣಿಯಾರ್ ಸಮುದಾಯಕ್ಕೆ ಅವಮಾನ ಮಾಡಲಾಗಿದೆ ಎಂದು ವೆಣ್ಣಿಯಾರ್ ಸಂಘ ಆಕ್ರೋಶ ವ್ಯಕ್ತಪಡಿಸಿತ್ತು. ಅಲ್ಲದೆ, ಈ ಸಂಬಂಧ ಕಾನೂನು ಸಮರಕ್ಕೂ ಮುಂದಾಗಿದೆ.
ಇದರ ಬೆನ್ನಲ್ಲೇ ತಮಗೆ ಸಾಕಷ್ಟು ಬೆದರಿಕೆ ಕರೆ ಬರುತ್ತಿದೆ. ಭದ್ರತೆ ನೀಡಿ ಎಂದು ಸೂರ್ಯ ಪೊಲೀಸರಿಗೆ ಮನವಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಅವರ ನಿವಾಸಕ್ಕೆ ಭದ್ರತೆ ಒದಗಿಸಲಾಗಿದೆ.