ಎರಡು ದಿನದಲ್ಲಿ ಜೈಲರ್ ಸಿನಿಮಾ ಗಳಿಸಿದ್ದೆಷ್ಟು?

ಶನಿವಾರ, 12 ಆಗಸ್ಟ್ 2023 (08:40 IST)
ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಸಿನಿಮಾಗಳೆಂದರೆ ಬಾಕ್ಸ್ ಆಫೀಸ್ ಧೂಳೆಬ್ಬಿಸುವುದು ಗ್ಯಾರಂಟಿ. ಇದೀಗ ಜೈಲರ್ ಸಿನಿಮಾವೂ ಎರಡೇ ದಿನಕ್ಕೆ ಭರ್ಜರಿ ಗಳಿಕೆ ಮಾಡಿದೆ.

ರಜನಿ, ಶಿವರಾಜ್ ಕುಮಾರ್, ಮೋಹನ್ ಲಾಲ್ ಸೇರಿದಂತೆ ಬಹುತಾರಾಗಣ ಸಿನಿಮಾದಲ್ಲಿದೆ. ಹೀಗಾಗಿ ಜನರೂ ಥಿಯೇಟರ್ ನತ್ತ ಹರಿದುಬರುತ್ತಿದ್ದಾರೆ.

ಮೊದಲ ದಿನ ಸಿನಿಮಾ 48 ಕೋಟಿ ರೂ. ಗಳಿಕೆ ಮಾಡಿತ್ತು. ಎರಡನೇ ದಿನ 27 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಎರಡು ದಿನಗಳಲ್ಲಿ 75 ಕೋಟಿ ರೂ. ಗಳಿಕೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ