ಜೈಲರ್ ಸಿನಿಮಾದ ಈ ದೃಶ್ಯದ ವಿರುದ್ಧ ರಜನಿ ಫ್ಯಾನ್ಸ್ ಆಕ್ರೋಶ

ಶುಕ್ರವಾರ, 4 ಆಗಸ್ಟ್ 2023 (08:40 IST)
Photo Courtesy: Twitter
ಚೆನ್ನೈ: ಬಹುನಿರೀಕ್ಷಿತ ಜೈಲರ್ ಸಿನಿಮಾದ ಟ್ರೈಲರ್ ಮೊನ್ನೆ ಲಾಂಚ್ ಆಗಿತ್ತು. ಟ್ರೈಲರ್ ನೋಡಿದ ಜನ ಸಾಕಷ್ಟು ಮೆಚ್ಚಿಕೊಂಡಿದ್ದರು. ಹಾಗಿದ್ದರೂ ಒಂದು ದೃಶ್ಯ ಅವರ ಆಕ್ರೋಶಕ್ಕೆ ಕಾರಣವಾಗಿದೆ.

ಸಿನಿಮಾದಲ್ಲಿ ಇರಲಿ, ನಿಜ ಜೀವನದಲ್ಲಿ ಇರಲಿ ರಜನಿಗೆ ಸಣ್ಣ ಅವಮಾನವಾಗುವಂತಹ ಘಟನೆಯಾದರೂ ಅವರ ಅಭಿಮಾನಿಗಳು ಸಹಿಸೋದಿಲ್ಲ. ಈಗ ಜೈಲರ್ ಸಿನಿಮಾದಲ್ಲೂ ಅಂತಹದ್ದೇ ದೃಶ್ಯವಿದೆ.

ಪೊಲೀಸ್ ಅಧಿಕಾರಿಯೊಬ್ಬರ ಬೂಟ್ ಪಾಲಿಶ್ ಮಾಡುವ ದೃಶ್ಯವೊಂದು ಟ್ರೈಲರ್ ನಲ್ಲಿದ್ದು, ಇದು ರಜನಿಗೆ ಮಾಡಿದ ಅವಮಾನ ಎಂದು ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ನಾವು ಎಂದಿಗೂ ನಮ್ಮ ತಲೈವಾ ಇನ್ನೊಬ್ಬರ ಬೂಟ್ ತಿಕ್ಕುವ ದೃಶ್ಯ ಸಹಿಸಲ್ಲ ಎಂದು ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ