ರಾಮ್ ಚರಣ್ ಗೆ ಜೋಡಿಯಾಗಲಿರುವ ಜಾಹ್ನವಿ ಕಪೂರ್

ಮಂಗಳವಾರ, 2 ಮೇ 2023 (07:10 IST)
Photo Courtesy: Twitter
ಹೈದರಾಬಾದ್: ಬಾಲಿವುಡ್ ನಟಿ ಜಾಹ್ನವಿ ಕಪೂರ್ ತೆಲುಗಿನಲ್ಲಿ ಮತ್ತಷ್ಟು ಸಿನಿಮಾ ಒಪ್ಪಿಕೊಳ್ಳುವ ನಿರೀಕ್ಷೆಯಿದೆ.

ಈಗಾಗಲೇ ಜಾಹ್ನವಿ ಜ್ಯೂ.ಎನ್ ಟಿಆರ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಇದರ ಜೊತೆಗೆ ಈಗ ರಾಮ್ ಚರಣ್ ಸಿನಿಮಾಗೆ ನಾಯಕಿಯಾಗುವ ಸುದ್ದಿ ಬಂದಿದೆ.

ರಾಮ್ ಚರಣ್ ತೇಜ ಮುಂದಿನ ಸಿನಿಮಾಗೆ ಜಾಹ್ನವಿ ಕಪೂರ್ ರನ್ನು ಕರೆತರಲು ಚಿತ್ರತಂಡ ಮಾತುಕತೆ ನಡೆಸುತ್ತಿದೆ. ಒಂದು ವೇಳೆ ಜಾಹ್ನವಿ ಒಪ್ಪಿಕೊಂಡರೆ ಇದು ಅವರ ಎರಡನೇ ತೆಲುಗು ಸಿನಿಮಾವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ