ಹೈದರಾಬಾದ್ ನಲ್ಲಿ ಶೂಟಿಂಗ್ ಗೆ ಬಿಲ್ ಕುಲ್ ಒಪ್ಪುತ್ತಿಲ್ಲ ಮಹೇಶ್ ಬಾಬು!

ಭಾನುವಾರ, 30 ಏಪ್ರಿಲ್ 2023 (07:10 IST)
Photo Courtesy: Twitter
ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ತವರು ಹೈದರಾಬಾದ್ ನಲ್ಲಿಯೇ ಶೂಟಿಂಗ್ ಮಾಡಲು ಇತ್ತೀಚೆಗೆ ಬಿಲ್ ಕುಲ್ ಒಪ್ಪುತ್ತಿಲ್ಲವಂತೆ! ಇದಕ್ಕೆ ಕಾರಣವೇನು ಗೊತ್ತಾ?

ಹೇಳಿ ಕೇಳಿ ಈಗ ಬೇಸಿಗೆಕಾಲ. ಅದರಲ್ಲೂ ಹೈದರಾಬಾದ್ ನಲ್ಲಂತೂ ಉರಿಬಿಸಿಲು ಕೆಂಡದಂತೆ ಸುಡುತ್ತಿರುತ್ತದೆ. ಅತೀ ಹೆಚ್ಚು ತಾಪಮಾನ ಇರುವ ನಗರಗಳಲ್ಲಿ ಒಂದು ಹೈದರಾಬಾದ್.

ಹೀಗಿರುವಾಗ ಇಂತಹ ಸುಡು ಬಿಸಿಲಲ್ಲಿ ಶೂಟಿಂಗ್ ಮಾಡಿದರೆ ತಮ್ಮ ಆರೋಗ್ಯ ಹಾಳಾಗಬಹುದು ಎಂಬ ಕಾರಣಕ್ಕೆ ಬೇಸಿಗೆಯಲ್ಲಿ ಹೈದರಾಬಾದ್ ನಲ್ಲಿ ಶೂಟಿಂಗ್ ಮಾಡಲು ಮಹೇಶ್ ಬಾಬು ಒಪ್ಪುತ್ತಿಲ್ಲವಂತೆ. ಹಿಂದೆಲ್ಲಾ ಮಹೇಶ್ ಬಾಬು ಬೇಸಿಗೆಯಲ್ಲಿ ಶೂಟಿಂಗ್ ಗೆ ಬ್ರೇಕ್ ತೆಗೆದುಕೊಂಡು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದರು. ಆದರೆ ಈಗ ಎಸ್ಎಸ್ಎಂಬಿ28 ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ