ಕಿಚ್ಚ ಸುದೀಪ್ ಜೊತೆ ಬಿಜೆಪಿ ಪರ ಪವನ್ ಕಲ್ಯಾಣ್ ಪ್ರಚಾರ?

ಗುರುವಾರ, 27 ಏಪ್ರಿಲ್ 2023 (06:50 IST)
ಬೆಂಗಳೂರು: ಈ ಬಾರಿ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಬಿಜೆಪಿಗೆ ಸ್ಟಾರ್ ನಟ ಕಿಚ್ಚ ಸುದೀಪ್ ಬಲ ಸಿಕ್ಕಿದೆ. ಇವರ ಜೊತೆಗೆ ಈಗ ಟಾಲಿವುಡ್ ಸ್ಟಾರ್ ಪವನ್ ಕಲ್ಯಾಣ್ ಕೂಡಾ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಆಂಧ್ರದಲ್ಲಿ ಸಿನಿಮಾ ಜೊತೆಗೆ ತಮ್ಮದೇ ಪಕ್ಷ ಕಟ್ಟಿಕೊಂಡು ರಾಜಕೀಯದಲ್ಲೂ ತೊಡಗಿಸಿಕೊಂಡಿರುವ ಪವನ್ ಕಲ್ಯಾಣ್ ಶಿಡ್ಲಘಟ್ಟದ ಬಿಜೆಪಿ ಅಭ್ಯರ್ಥಿ ಸಿಕ್ಕಲ್ ರಾಮಚಂದ್ರ ಗೌಡ ಪರ ಪ್ರಚಾರ ನಡೆಸಲಿದ್ದಾರೆ ಎನ್ನಲಾಗಿದೆ.

ಇದೇ ಅಭ್ಯರ್ಥಿ ಪರ ಕಿಚ್ಚ ಸುದೀಪ್ ಕೂಡಾ ಪ್ರಚಾರ ನಡೆಸಲಿದ್ದಾರೆ. ಹೀಗಾಗಿ ಕಿಚ್ಚ-ಪವನ್ ಕಲ್ಯಾಣ್ ಜೊತೆಯಾಗಿ ಪ್ರಚಾರ ನಡೆಸಿದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ