ವಿಜಯಪುರದಲ್ಲಿ ರಸ್ತೆ ಮಧ್ಯದಲ್ಲೇ ನಟ ಜೆಕೆ ಫೈಟ್

ಮಂಗಳವಾರ, 5 ಜನವರಿ 2021 (09:08 IST)
ಬೆಂಗಳೂರು: ನಟ ಜೆಕೆ ಅಲಿಯಾಸ್ ಜಯರಾಮ್ ಕಾರ್ತಿಕ್ ವಿಜಯಪುರದಲ್ಲಿ ಹಾಡು ಹಗಲೇ ರಸ್ತೆ ಮಧ್ಯದಲ್ಲೇ ಫೈಟಿಂಗ್ ಮಾಡಿದ್ದಾರೆ. ಆದರೆ ಇದೆಲ್ಲವೂ ಶೂಟಿಂಗ್ ಗಾಗಿ.


ಜೆಕೆ ‘ಐರಾವನ್’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ಸಾಹಸ ದೃಶ್ಯವೊಂದನ್ನು ವಿಜಯಪುರದಲ್ಲಿ ಚಿತ್ರೀಕರಿಸಲಾಗುತ್ತಿದೆ. ಈ ದೃಶ‍್ಯ ವೀಕ್ಷಿಸಲು ಸಾವಿರಾರು ಜನರು ಅಲ್ಲಿ ನೆರೆದಿದ್ದರು. ಈ ಸಿನಿಮಾದ ಟೀಸರ್ ನ್ನು ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದರು. ಜೆಕೆ ಈ ಸಿನಿಮಾದಲ್ಲಿ ರಫ್ ಆಂಡ್ ಟಫ್ ಪಾತ್ರ ಮಾಡುತ್ತಿರುವುದು ಕನ್ ಫರ್ಮ್ ಆಗಿದೆ. ಜೆಕೆಗೆ ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ