ಭಟ್ಟರ ಪಂಚತಂತ್ರದಲ್ಲಿ ಜೋಗಿ ಪ್ರೇಮ್ ಗೇನು ಕೆಲಸ?!

ಭಾನುವಾರ, 24 ಮಾರ್ಚ್ 2019 (09:11 IST)
ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾ ಇದೇ ಮಾರ್ಚ್ 29 ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದೀಗ ಸಿನಿಮಾ ಬಿಡುಗಡೆಗೆ ಮೊದಲು ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಲು ಭಟ್ಟರು ನಿರ್ಧರಿಸಿದ್ದಾರೆ.


ಈಗಾಗಲೇ ಪಂಚತಂತ್ರದ ಎಲ್ಲಾ ಹಾಡುಗಳು ಯೂ ಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿವೆ. ನಾಳೆ ಅಂದರೆ ಮಾರ್ಚ್ 25 ರಂದು ಸಂಜೆ ಏಳು ಗಂಟೆಗೆ ಪಂಚತಂತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಲಿದೆ.

ಈ ಹಾಡಿನ ವಿಶೇಷ ಎಂದರೆ ಮೂವರು ದಿಗ್ಗಜ ಸಂಗಮ. ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ಧ್ವನಿಯಾಗಿದ್ದು, ಜೋಗಿ ಪ್ರೇಮ್. ಆ ಮೂಲಕ ಭಟ್ಟರ ಸಿನಿಮಾಕ್ಕೆ ಜೋಗಿ ಪ್ರೇಮ್ ಧ್ವನಿಗೂಡಿಸಿದಂತಾಗಿದೆ. ಈ ಹಾಡು ಹೇಗಿರ್ತದೆ ಎಂದು ಕೇಳಲು ನಾಳೆವರೆಗೆ ಕಾಯಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ