ವಿದೇಶಕ್ಕೆ ಹೋಗಿದ್ದಕ್ಕೆ ಭಾಷೆ ವರಸೆ ಬದಲಾಯ್ತಾ? ಟ್ರೋಲ್ ಆದ ಜ್ಯೂ.ಎನ್ ಟಿಆರ್

ಗುರುವಾರ, 12 ಜನವರಿ 2023 (10:51 IST)
Photo Courtesy: Twitter
ಹೈದರಾಬಾದ್: ಲಾಸ್ ಏಂಜಲೀಸ್ ನಲ್ಲಿ ಗೋಲ್ಡನ್ ಗ್ಲೋಬ್ ಅವಾರ್ಡ್ ಸಮಾರಂಭದಲ್ಲಿ ಪಾಲ್ಗೊಂಡಿರುವ ಆರ್ ಆರ್ ಆರ್ ನಾಯಕ ಜ್ಯೂ.ಎನ್ ಟಿಆರ್ ಈಗ ಟ್ರೋಲ್ ಆಗುತ್ತಿದ್ದಾರೆ.

ಆರ್ ಆರ್ ಆರ್ ಸಿನಿಮಾದ ನಾಟ್ಟು ನಾಟ್ಟು ಹಾಡು ಪ್ರಶಸ್ತಿ ಗೆದ್ದು ಈ ಸಾಧನೆ ಮಾಡಿದ ಮೊದಲ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಕಾರಣಕ್ಕೆ ಎಲ್ಲರಿಂದ ಮೆಚ್ಚುಗೆ ಬರುತ್ತಿದೆ.

ಆದರೆ ಕಾರ್ಯಕ್ರಮದಲ್ಲಿ ಸಂದರ್ಶಕರೊಂದಿಗೆ ಜ್ಯೂ.ಎನ್ ಟಿಆರ್ ಮಾತನಾಡಿದ ಇಂಗ್ಲಿಷ್ ಉಚ್ಛರಣಾ ಶೈಲಿ ಈಗ ಎಲ್ಲರ ಟೀಕೆಗೆ ಗುರಿಯಾಗಿದೆ. ಜ್ಯೂ.ಎನ್ ಟಿಆರ್ ಸಂದರ್ಶಕರೊಂದಿಗೆ ಪಾಶ್ಚಿಮಾತ್ಯ ಶೈಲಿಯ ಇಂಗ್ಲಿಷ್ ಮಾತನಾಡಲು ಹೋಗಿ ನಾಟಕೀಯವಾಗಿ ಮಾತನಾಡುತ್ತಾರೆ. ಇದನ್ನು ಗಮನಿಸಿ ನೆಟ್ಟಿಗರು ವಿದೇಶಕ್ಕೆ ಹೋದೊಡನೆ ನಮ್ಮ ಭಾಷಾ ಶೈಲಿಯೂ ಬದಲಾಗಬೇಕಾ? ಈ ಮಾತು ಫೇಕ್ ಎನಿಸುತ್ತದೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ