ಕರಣ್ ಜೋಹರ್ ಶೋಗೆ ಬರಲು ನಿರಾಕರಿಸಿದ ಜೂ.ಎನ್ ಟಿಆರ್, ರಾಮ್ ಚರಣ್
ಈಗ ಈ ಕಾರ್ಯಕ್ರಮದ ಹೊಸ ಸೀಸನ್ ಒಟಿಟಿ ಮೂಲಕ ಅಂದರೆ ಡಿಸ್ನಿ ಹಾಟ್ ಸ್ಟಾರ್ ಮೂಲಕ ಜುಲೈ 7 ರಿಂದ ಪ್ರಸಾರವಾಗಲಿದೆ. ಒಟಿಟಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗುತ್ತಿರುವುದು ಇದೇ ಮೊದಲು.
ಈ ಕಾರ್ಯಕ್ರಮಕ್ಕೆ ಈ ಬಾರಿ ಆರ್ ಆರ್ ಆರ್ ಸ್ಟಾರ್ ಗಳಾದ ಜೂ.ಎನ್ ಟಿಆರ್ ಮತ್ತು ರಾಮ್ ಚರಣ್ ಜೊತೆಯಾಗಿ ಬರಬಹುದು ಎನ್ನಲಾಗಿತ್ತು. ಆದರೆ ಇಬ್ಬರೂ ಆಫರ್ ತಿರಸ್ಕರಿಸಿದ್ದಾರೆಂದು ಕೇಳಿಬಂದಿದೆ. ಇದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.