ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ತಮ್ಮ ಅಭಿಷೇಕ್ ಗಾಗಿ ಪ್ರಮೋಷನ್ ಮಾಡಿದ ದರ್ಶನ್
ಈಗಾಗಲೇ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತ್ತು. ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ರೈಲರ್ ಲಾಂಚ್ ಮಾಡಿದ ತಮ್ಮ ಅಭಿಗೆ ಶುಭ ಹಾರೈಸಿದ್ದರು.
ಇದೀಗ ಸಿನಿಮಾ ವೀಕ್ಷಿಸಿದ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅಭಿ ಸಿನಿಮಾಗೆ 5 ಕ್ಕೆ 5 ಅಂಕ ನೀಡಿ ಹಾರೈಸಿದ್ದಾರೆ.
ಸಿನಿಮಾ ತುಂಬಾ ಚೆನ್ನಾಗಿದೆ. ಎಲ್ಲರೂ ನವಂಬರ್ 24 ಕ್ಕೆ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂದು ದರ್ಶನ್ ತಮ್ಮ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ. ಅಣ್ಣನ ಕಾಂಪ್ಲಿಮೆಂಟ್ ಅಭಿಗೂ ಖುಷಿ ನೀಡಿದೆ.