ಉಪೇಂದ್ರ ‘ಕಬ್ಜ’ ಶೇ.45 ಪೂರ್ಣ: ಸದ್ಯದಲ್ಲೇ ಚಿತ್ರತಂಡ ಕೂಡಿಕೊಳ್ಳಲಿರುವ ಇಬ್ಬರು ಸ್ಟಾರ್ ನಟರು
ಸೋಮವಾರ, 28 ಸೆಪ್ಟಂಬರ್ 2020 (11:03 IST)
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುಭಾಷಾ ಸಿನಿಮಾ ‘ಕಬ್ಜ’ ಶೂಟಿಂಗ್ ಶೇ. 45 ರಷ್ಟು ಪೂರ್ಣಗೊಂಡಿದೆ.
ಉಪೇಂದ್ರ ಅಭಿನಯದ ಈ ಸಿನಿಮಾವನ್ನು ಆರ್ ಚಂದ್ರು ನಿರ್ದೇಶಿಸುತ್ತಿದ್ದು 80 ರ ದಶಕದ ಭೂಗತ ಲೋಕದ ಕತೆ ಒಳಗೊಂಡಿದೆ. ಈ ಸಿನಿಮಾದಲ್ಲಿ ಉಪೇಂದ್ರ ಅಲ್ಲದೆ ತೆಲುಗು ಸ್ಟಾರ್ ನಟ ಜಗಪತಿ ಬಾಬು, ಕಬೀರ್ ಸಿಂಗ್ ಕೂಡಾ ಅಭಿನಯಿಸುತ್ತಿದ್ದಾರೆ. ಈ ನಟರು ಸದ್ಯದಲ್ಲೇ ಚಿತ್ರತಂಡ ಕೂಡಿಕೊಳ್ಳಲಿದ್ದಾರೆ.