ಸ್ಟಾರ್ ಗಳು ಮತ್ತೆ ಶೂಟಿಂಗ್ ನತ್ತ: ಇನ್ನು ಥಿಯೇಟರ್ ತೆರೆಯೋದೊಂದೇ ಬಾಕಿ

ಭಾನುವಾರ, 27 ಸೆಪ್ಟಂಬರ್ 2020 (09:24 IST)
ಬೆಂಗಳೂರು: ಲಾಕ್ ಡೌನ್, ಕೊರೋನಾ ಬಳಿಕ ಸ್ಯಾಂಡಲ್ ವುಡ್ ಮತ್ತೆ ಗರಿಗೆದರುತ್ತಿದ್ದು, ಸ್ಟಾರ್ ಗಳು ಮತ್ತೆ ಶೂಟಿಂಗ್ ನತ್ತ ಮುಖ ಮಾಡುತ್ತಿದ್ದಾರೆ.


ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಯುವರತ್ನ ಸಿನಿಮಾದ ಹಾಡಿನ ಭಾಗದ ಚಿತ್ರೀಕರಣ ಆರಂಭವಾಗುತ್ತಿದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ವೀರಮದಕರಿ ನಾಯಕ’ ಸಿನಿಮಾ ಶೂಟಿಂಗ್ ಕೂಡಾ ಅಕ್ಟೋಬರ್ ನಲ್ಲಿ ಆರಂಭವಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2, ಶ್ರೀಮುರಳಿ ಅಭಿನಯದ ಮದಗಜ, ಗೋಲ್ಡನ್ ಸ್ಟಾರ್ ಗಣೇಶ್ ತ್ರಿಬಲ್ ರೈಡಿಂಗ್, ಧ್ರುವ ಸರ್ಜಾರ ‘ಪೊಗರು’, ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2, ರಿಯಲ್ ಸ್ಟಾರ್ ಉಪೇಂದ್ರರ ತ್ರಿಶೂಲ, ಕಬ್ಜ ಸಿನಿಮಾ ಶೂಟಿಂಗ್ ಈಗಾಗಲೇ ಶುರುವಾಗಿದೆ.

ಆದರೆ ಈ ರೀತಿ ಎಲ್ಲಾ ಸ್ಟಾರ್ ಗಳೂ ಸಾಲು ಸಾಲಾಗಿ ಚಿತ್ರ ರೆಡಿ ಮಾಡಿಕೊಂಡು ಕೂತರೆ ಚಿತ್ರಮಂದಿರ ಮಾತ್ರ ಇನ್ನೂ ತೆರೆದಿಲ್ಲ. ಬಹುಶಃ ಮುಂದಿನ ವರ್ಷಕ್ಕೆ ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆಯಾಗಬಹುದು. ಆಗ ವೀಕ್ಷಕರಿಗೆ ಯಾವುದನ್ನು ನೋಡುವುದು ಬಿಡುವುದು ಎಂಬ ಕನ್ ಫ್ಯೂಸ್ ಆಗುವುದು ಖಂಡಿತಾ. ಇದರ ನಡುವೆ ಕೆಲವು ಸಣ್ಣ ಬಜೆಟ್ ನ ಹೊಸಬರ ಸಿನಿಮಾಗಳು ಆನ್ ಲೈನ್ ಫ್ಲ್ಯಾಟ್ ಫಾರಂಗಳಲ್ಲಿಯೇ ಬಿಡುಗಡೆಯಾಗುತ್ತಿವೆ. ಹೀಗಾಗಿ ಚಿತ್ರರಂಗ ಮತ್ತೆ ನಿಧಾನಕ್ಕೆ ಸಹಜ ಸ್ಥಿತಿಗೆ ಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ