ಮದುವೆಯ ಸಂಭ್ರಮದಲ್ಲಿ ನಯನತಾರಾ-ವಿಘ್ನೇಶ್ ಜೋಡಿ: ಸಿಎಂ ಸ್ಟಾಲಿನ್ ಗೆ ಆಹ್ವಾನ
ಇಬ್ಬರೂ ಜೂನ್ 9 ರಂದು ಅದ್ಧೂರಿಯಾಗಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಯಿದೆ. ಈ ಹಿನ್ನಲೆಯಲ್ಲಿ ನಯನತಾರಾ ಮತ್ತು ವಿಘ್ನೇಶ್ ಜೋಡಿ ತಮಿಳುನಾಡು ಸಿಎಂ ಸ್ಟಾಲಿನ್ ಅವರನ್ನು ಭೇಟಿಯಾಗಿ ಮದುವೆಗೆ ಆಹ್ವಾನವನ್ನೂ ನೀಡಿದೆ.
ಇನ್ನು, ನಯನತಾರಾ-ವಿಘ್ನೇಶ್ ಮದುವೆಯನ್ನು ಅಭಿಮಾನಿಗಳೂ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಹೀಗಾಗಿ ಇದರ ಲಾಭ ಪಡೆದುಕೊಳ್ಳಲು ಒಟಿಟಿ ಸಂಸ್ಥೆಗಳಿಂದ ನೇರಪ್ರಸಾರದ ಹಕ್ಕಿಗಾಗಿ ಭಾರೀ ಬೇಡಿಕೆ ಬಂದಿದೆ ಎನ್ನಲಾಗಿದೆ.