ಬಿಗ್ ಬಾಸ್`ನಲ್ಲಿ ಸೂಪರ್ ಸ್ಟಾರ್ ಕಮಲ್ ಹಾಸನ್

ಸೋಮವಾರ, 24 ಏಪ್ರಿಲ್ 2017 (20:04 IST)
ತಮಿಳಿನ ಸೂಪರ್ ಸ್ಟಾರ್ ಕಮಲ್ ಹಾಸನ್ ಕಿರುತೆರೆ ಎಂಟ್ರಿಗೆ ವೇದಿಕೆ ಸಜ್ಜಾಗಿದೆ. 5 ದಶಕಗಳಿಂದ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಕಮಲ್ ಹಾಸನ್, ತಮಿಳು ಬಿಗ್ ಬಾಸ್ ಮೂಲಕ ಕಿರುತೆರೆ ಎಂಟ್ರಿ ಕೊಡುತ್ತಿದ್ದಾರೆ.
 

ಖಾಸಗಿ ಜಾಲತಾಣದ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ಈ ಸುದ್ದಿಯನ್ನ ಖಚಿತಪಡಿಸಿದ್ದಾರೆ. `ಹೌದು, ನಾನು ತಮಿಳಿನ ಬಿಗ್ ಬಾಸ್`ನಲ್ಲಿ ನಿರೂಪಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನಟನಾಗಿ ಹಲವು ಪಾತ್ರಗಳನ್ನ ಮಾಡಿದ್ದೇನೆ. ಒಂದು ಟೆಲಿವಿಜನ್ ಕಾರ್ಯಕ್ರಮದ ನಿರೂಪಣೆ ಮಾಡಿಲ್ಲ. ಿದು ಯಾವುದೇ ರೀತಿಯ ಅನುಭವ ಕೊಡುತ್ತದೆ ಎಂಬುದನ್ನ ತಿಳಿಯಲು ಉತ್ಸುಕನಾಗಿರುವುದಾಗಿ ಕಮಲ್ ಹಾಸನ್ ಹೇಳಿದ್ದಾರೆ.

ಕಮಲ್ ಹಾಸನ್ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದರೂ ನಡುವಿನ ಸಮಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿದ್ದಾರೆ. ನಾನು ಯಾವಾಗಲೂ ಶೆಡ್ಯೂಲ್ ಹಿಂದೆ ಓಡುತ್ತಿರುತ್ತೇನೆ. ಆದರೆ, ಕಳೆದ 8 ತಿಂಗಳಿಂದ ಆ ಓಡಾಟ ಇಲ್ಲ. ಇದಕ್ಕೆ ನನ್ನ ಮುರಿದ ಕಾಲಿಗೆ ಥ್ಯಾಂಕ್ಸ್ ಹೇಳಬೇಕು ಎಂದಿದ್ದಾರೆ.ಸದ್ಯ, ಕಾಮಿಡಿ ಚಿತ್ರ ಶಬಾಶ್ ನಾಯ್ಡು ಮತ್ತು ವಿಶ್ವರೂಪಂ-2 ಪೋಸ್ಟ್ ಪ್ರೊಡಕ್ಷನ್`ನಲ್ಲಿ ಬ್ಯುಸಿಯಾಗಿದ್ದೇನೆ. ಈ ಮಧ್ಯೆ ಬಿಗ್ ಬಾಸ್ ಒಪ್ಪಿಕೊಂಡಿದ್ದೇನೆ. ಹೇಗಾಗುತ್ತದೆ ಎಂದು ನೋಡೋಣ ಎಂದು  ಕಮಲ್ ಹೇಳಿದ್ದಾರೆ.

ಹಿಂದಿಯ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕಮಲ್ ಹಾಸನ್, ಸಲ್ಮಾನ್ ಖಾನ್ ಉತ್ತಮವಾಗಿ ನಡೆಸಿಕೊಡುತ್ತಿದ್ದಾರೆ. ಸ್ಪರ್ಧಿಗಳ ಜೊತೆ ಸ್ನೇಹಜೀವಿಯಾಗಿದ್ದಾರೆ. ಯಾವುದೇ ನಾಟಕೀಯವೆನಿಸದೇ ಹೃದಯಪೂರ್ವಕವಾಗಿ ಸ್ಪಂದಿಸುತ್ತಾರೆ. ನಾನೂ ಸಹ ಅವರಂತೆ ಇರಲು ಯತ್ನಿಸುತ್ತೇನೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ