ಮತ್ತೇ ಹೀರೋ ಆಗಿ ಕಮಾಲ್‌ ಮಾಡಲಿರುವ ʼಚಿಕ್ಕಣ್ಣʼ

sampriya

ಬುಧವಾರ, 5 ಜೂನ್ 2024 (16:54 IST)
Photo By Instagram
ಬೆಂಗಳೂರು: ಉಪಾಧ್ಯಕ್ಷ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ನಾಯಕ ನಟನಾಗಿ ಕಮಾಲ್‌ ಮಾಡಿದ ನಟ ಚಿಕ್ಕಣ್ಣ ಇದೀಗ ಮತ್ತೇ ಹೀರೋ ಆಗಿ ತೆರೆ ಮೇಲೆ ಬರಲಿದ್ದಾರೆ.

‘ಮಾರ್ಟಿನ್’,ಕಿಸ್‌, ಸಿನಿಮಾ ನಿರ್ದೇಶಕ  ಎ.ಪಿ ಅರ್ಜುನ್  ಅವರ ಮುಂದಿನ ನಿರ್ದೇಶನದ ಸಿನಿಮಾದಲ್ಲಿ ಚಿಕ್ಕಣ್ಣ ಅವರು ಅಭಿನಯಿಸಲಿದ್ದಾರೆ. ಇದೀಗ ಉಪಾಧ್ಯಕ್ಷ ಯಶಸ್ವಿನ ಬೆನ್ನಲ್ಲೇ ಚಿಕ್ಕಣ್ಣ ಮತ್ತೊಂದು ಬಂಪರ್‌ ಆಫರ್‌ ಗಿಟ್ಟಿಸಿಕೊಂಡಿದ್ದು, ಈ ಬಗ್ಗೆ ಇನ್ನಷ್ಟೇ ಅಧಿಕೃತ ಘೋಷಣೆಯಾಗಬೇಕಿದೆ.

ಈಚೆಗೆ ಉಮಾಪತಿ ಶ್ರೀನಿವಾಸ್ ಅವರ ನಿರ್ಮಾಣದಲ್ಲಿ ಮೂಡಿಬಂದ ‘ಉಪಾಧ್ಯಕ್ಷ’ ಸಿನಿಮಾದಲ್ಲಿ ನಾಯಕನಾಗಿ ಚಿಕ್ಕಣ್ಣ  ಮೊದಲ ಬಾರಿ ನಟಿಸಿದ್ದರು. ಈ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ಮಲೈಕಾ ವಸುಪಾಲ್ ಅವರು ನಾಯಕಿಯಾಗಿ ನಟಿಸಿದರು. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಬಂಪರ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.

ಇನ್ನೂ ಸಿನಿಮಾದ ಬಗ್ಗೆ ಇದುವರೆಗೂ ಘೋಷಣೆಯಾಗಿಲ್ಲ, ಆದರೆ ಗಾಂಧಿನಗರದಲ್ಲಿ ಮಾತ್ರ ಈ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಇನ್ನೂ ಈ ನ್ಯೂಸ್‌ ಕೇಳಿ ಚಿಕ್ಕಣ್ಣ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ