ವಿಜಯನಗರ ವೀರ ಪುತ್ರ ಹಿರಿಯ ನಟ ಸುದರ್ಶನ್ ವಿಧಿವಶರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ನಾರೋಗ್ಯದಿಂದ ಬಳಲುತ್ತಿದ್ದ ಸುದರ್ಶನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಖಳನಟರಾಗಿ ಖ್ಯಾತಿ ಗಳಿಸಿದ್ದ ಸುದರ್ಶನ್ ಕನ್ನಡ, ತಮಿಳು, ಮಲೆಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು. ಸುದರ್ಶನ್ ಅತಿ ಹೆಚ್ಚು ಚಿತ್ರಗಳಲ್ಲಿ ನಟಿಸಿರುವುದ ಕನ್ನಡದಲ್ಲೇ. ನಟರಷ್ಟೇ ಅಲ್ಲ, ಕಂಠದಾನ ಕಲಾವಿದರಾಗಿ, ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ನಗುವ ಹೂವು, ಮರೆಯದ ದೀಪಾವಳಿ, ಸೂಪರ್, ಮಠ ಸೇರಿದಂತೆ 250ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಚಂಡ ಕುಳ್ಳ ಚಿತ್ರದ ಕಿಂಕಿಣಿ ಶರ್ಮಾ ಎಂಬ ಮಾಂತ್ರಿಕನ ಪಾತ್ರದಲ್ಲಿ ಸುದರ್ಶನ್ ಅಭಿನಯ ಇಂದಿಗೂ ಕಣ್ಣಿಗೆ ಕಟ್ಟಿದಂತಿದೆ.
ಕನ್ನಡದ ಖ್ಯಾತ ನಿರ್ದೇಶಕ ಆರ್.ಎನ್. ಜಯಗೋಪಾಲ್ ಅವರ ಸೋದರರಾದ ಆರ್.ಎಸ್. ಸುದರ್ಶನ್ ಪತ್ನಿ ಶೈಲಜಾ ಸಹ ನಟಿಯಾಗಿ ಗಮನ ಸೆಳೆದಿದ್ದರು. ಹಿರಿತೆರೆಯಲ್ಲಷ್ಟೇ ಅಲ್ಲದೆ ಕಿರುತೆರೆಯಲ್ಲೂ ಸುದರ್ಶನ್ ನಟಿಸಿದ್ದಾರೆ. ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸ್ವಾಮೀಜಿ ಪಾತ್ರದಲ್ಲಿ ಅವರು ನಟಿಸುತ್ತಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ